Advertisement

ಬಜೆಟ್‌ ಮಂಡನೆವರೆಗೂ ಅಧಿಕಾರಿಗಳಿಗೆ ರಜೆ ಇಲ್ಲ

11:28 PM Feb 22, 2020 | Lakshmi GovindaRaj |

ಬೆಂಗಳೂರು: ಬಜೆಟ್‌ ಮಂಡನೆಯಾಗುವವರೆಗೂ ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚಿಸಿದ್ದಾರೆ. ಈಗಾಗಲೇ ಬಜೆಟ್‌ ಸಿದ್ಧತೆ ನಡೆಸಿರುವ ಅವರು, ಶನಿವಾರ, ರಜಾ ದಿನವೂ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Advertisement

ಈಗಾಗಲೇ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿರುವ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಹೊಸ ಯೋಜನೆಗಳಿಗೆ ಬೇಕಾಗುವ ಹಣಕಾಸಿನ ಲಭ್ಯತೆಯ ಕುರಿತು ಚರ್ಚಿಸಿದರು.

ಮಾರ್ಚ್‌ 5ರಂದು ಬಜೆಟ್‌ ಮಂಡನೆ ಮಾಡುತ್ತಿರುವುದರಿಂದ ಮುಖ್ಯಮಂತ್ರಿಯವರು ಪ್ರತಿ ದಿನವೂ ಬಿಡುವಿಲ್ಲದೇ ಬಜೆಟ್‌ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳಿಗೂ ಯಾವುದೇ ಸಮಯದ ನಿರ್ಬಂಧವಿಲ್ಲದೇ ಕೆಲಸ ಮಾಡಲು ಸೂಚಿಸಿದ್ದು, ಹಬ್ಬ ಹಾಗೂ ಭಾನುವಾರದ ರಜೆಗಳನ್ನೂ ಬದಿಗಿಟ್ಟು, ಸಕ್ರೀಯರಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next