Advertisement
ಅವರು ಶನಿವಾರ ಕೆಂಜೂರು ಸುರಕ್ಷಿತ ಸಭಾಭವನದಲ್ಲಿ ಕೆಂಜೂರು ಗ್ರಾಮ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಕ್ಷೇತ್ರದ ಗ್ರಾಮಾಂತರ ಭಾಗಕ್ಕೆ ಕೋಟ್ಯಂತರ ರೂ. ಅನುದಾನ, ಉಚಿತ ವಿದ್ಯುತ್ ಸಂಪರ್ಕ, ಬಿಪಿಎಲ್ ಕಾರ್ಡ್ ವಿತರಣೆ, ನರ್ಮ್ ಬಸ್ ಸಂಚಾರ ಮತ್ತಿತರ ಸೌಕರ್ಯಗಳನ್ನು ಕಲ್ಪಿಸ ಲಾಗಿದೆ ಎಂದು ಸಚಿವ ಪ್ರಮೋದ್ ಹೇಳಿದರು. ಸಾಲ ಮನ್ನಾ
ರಾಜ್ಯ ಸರಕಾರವು ಘೋಷಿಸಿದ ಸಾಲ ಮನ್ನಾದಿಂದ ಕೊಕ್ಕರ್ಣೆ ಸಿಂಡಿಕೇಟ್ ರೈ.ಸೇ.ಸ.ಸಂಘ ಒಂದರಲ್ಲೇ 739 ಸದಸ್ಯರು 3.43 ಕೋಟಿ ರೂ. ಮೊತ್ತದ ಪ್ರಯೋಜನ ಪಡೆದಿದ್ದಾರೆ ಎಂದರು.
Related Articles
Advertisement
ಇದೇ ಸಂದರ್ಭ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಪಂ. ಸದಸ್ಯೆ ಗೌರಿ ಸ್ವಾಗತಿಸಿ, ತಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆಗೈದರು.
ಆ. 1ರಿಂದ ಮರಳು
ಹಸಿರು ಪೀಠದ ಆದೇಶದಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಆದರೆ ಬರುವ ಆಗಸ್ಟ್ 1ರಿಂದ ಮತ್ತೆ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡು ಧಾರಾಳವಾಗಿ ಮರಳು ದೊರೆಯ ಲಿದೆ ಎಂದು ಸಚಿವರು ಹೇಳಿದರು.