ಹೈದರಾಬಾದ್: ಭಾರತದ ದುಬಾರಿ ಸಿನಿಮಾವೆಂದೇ ಹೇಳಲಾಗುತ್ತಿರುವ ಪ್ರಭಾಸ್ ಅವರ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿʼ ಅಧಕೃತ ರಿಲೀಸ್ ಡೇಟ್ ಶನಿವಾರ(ಏ.27 ರಂದು) ರಿವೀಲ್ ಆಗಿದೆ.
ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿʼ ಪೌರಾಣಿಕ ಕಥೆಯನ್ನೊಳಗೊಂಡಿದ್ದು, ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿದೆ. ಇತ್ತೀಚೆಗೆ ಅಮಿತಾಭ್ ಬಚ್ಚನ್ ಅವರ ʼ ʼಅಶ್ವತ್ಥಾಮʼ ಫಸ್ಟ್ ಲುಕ್ ರಿಲೀಸ್ ಆಗಿ ಸದ್ದು ಮಾಡಿದೆ.
ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಆರಂಭದಿಂದಲೂ ಗೊಂದಲಗಳಿವೆ. ಇದೇ ವರ್ಷದ ಮೇ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಆಗುವುದು ಬಹುತೇಕ ಅಧಕೃತವಾಗಿತ್ತು. ಆದರೆ ಮತ್ತೆ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಇದೀಗ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಎಳೆದಿದೆ.
ಪ್ರಭಾಸ್, ಅಮಿತಾಭ್ ಹಾಗೂ ದೀಪಿಕಾ ಅವರ ಪಾತ್ರದ ಲುಕ್ ವುಳ್ಳ ಪೋಸ್ಟರ್ ನ್ನು ರಿಲೀಸ್ ಮಾಡುವ ಮೂಲಕ ಸಿನಿಮಾ ಬಿಡುಗಡೆ ದಿನಾಂಕವನ್ನು ರಿವೀಲ್ ಮಾಡಿದೆ.
ಇದೇ ಜೂ.28 ರಂದು ಸೈನ್ಸ್ ಫಿಕ್ಷನ್ ‘ಕಲ್ಕಿ 2898 ಎಡಿʼ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಬಹು ನಿರೀಕ್ಷಿತ ಸಿನಿಮಾದಲ್ಲಿ ಖ್ಯಾತನಾಮ ಕಲಾವಿದರ ದಂಡೇ ಇದೆ. ಮುಖ್ಯವಾಗಿ ಪ್ರಭಾಸ್, ಅಮಿತಾಭ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಂತಾದ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.