Advertisement

ವಿವಿಧ ಗ್ರಾಮಗಳಲ್ಲಿನ ಬೆಳೆ ಹಾನಿ ಪರಿಶೀಲಿಸಿದ ಅಧಿಕಾರಿಗಳು

02:58 PM Nov 25, 2021 | Team Udayavani |

ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ, ಬಸವನಬಾಗೇವಾಡಿ, ಹೂವಿನಹಿಪ್ಪರಗಿ, ಮನಗೂಳಿ, ಟಕ್ಕಳಕಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಬುಧವಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಬೆಳೆಹಾನಿ ಸಮೀಕ್ಷೆ ಮಾಡಿದರು.

Advertisement

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್‌. ಯರಝರಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದ ಅತಿ ಹೆಚ್ಚು ತೊಗರಿ, ಗೋವಿನ ಜೋಳ ಹಾಳಾಗಿದೆ. ಇನ್ನೂ ಈ ಅಕಾಲಿಕ ಮಳೆಯಿಂದ ಗೋಧಿ, ಕಡಲೆ, ಬಿಳಿ ಜೋಳದ ಬೆಳೆಗೆ ಅಕಾಲಿಕ ಮಳೆ ಅನುಕೂಲವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಹಾನಿಯ ಬಗ್ಗೆ ನಿಕರತೆಯನ್ನು ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವದಾಗಿ ರೈತರಿಗೆ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ| ರಾಶೇಖರ ಮಿಲಿಯಮ್ಸ, ಡಾ| ಅಶೋಕ ಸಜ್ಜನ, ಕೃಷಿ ವಿಜ್ಞಾನಿ ಡಾ| ಎಂ.ಎಸ್‌. ವಸ್ತ್ರದ, ತಾಲೂಕು ಕೃಷಿ ಅಧಿಕಾರಿ ಸಿ.ಎಂ. ಹಿರೇಮಠ, ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ದ್ಯಾಮನಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next