ಬಂಕಾಪುರ: ಪಟ್ಟಣದ ಕೊಟ್ಟಿಗೇರಿ ಸೀಲ್‌ಡೌನ್ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರಿಂದ ಸೀಲ್‌ಡೌನ್ ಪ್ರದೇಶದ ಮನೆ, ಮನೆಗೆ ದಿನಸಿ ಸಾಮಗ್ರಿಗಳು, ತರಕಾರಿ, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಅವಶ್ಯಕ ವಸ್ತುಗಳ ಪೂರೈಕೆ ಕುರಿತು ಸಂಪೂರ್ಣ ಮಾಹಿತಿ ಪಡೆದರು. ಫಿವರ್ ಕ್ಲಿನಿಕ್, ಕಂಟ್ರೋಲ್ ರೂಂಗೆ ತೆರಳಿ ಸೀಲ್ ಡೌನ್ ಪ್ರದೇಶದೊಳಗಿರುವವರ ಆರೋಗ್ಯದ ಕುರಿತು ಸಂಬಂಧಪಟ್ಟ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಜನರ ಸಮಸ್ಯೆಗಳ ಕುರಿತು ಆಲಿಸಿ
ಪರಿಹರಿಸುವ ಬಗೆಹರಿಸುವ ಭರವಸೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ನೈರ್ಮಲ್ಯ ಅಧಿಕಾರಿ ರೂಪಾ ನಾಯಕ ಇದ್ದರು.