Advertisement
ರಂಗ ಮಂದಿರದಲ್ಲಿ ಬೆಳೆದಿರುವ ಜಾಲಿ ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗುವುದು. ಅರ್ಧಕ್ಕೆ ನಿಂತಿರುವ ರಂಗ ಮಂದಿರವನ್ನು ಪೂರ್ಣಗೊಳಿಸಲು 25 ಲಕ್ಷ ರೂ. ಮಂಜೂರಾಗಿದ್ದು ಕೂಡಲೇ ಅರ್ಧಕ್ಕೆ ನಿಂತಿರುವ ಕಂದಗಲ್ಲ ಹನಮಂತರಾಯರ ರಂಗಮಂದಿರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕಂದಗಲ್ಲ ಹನಮಂತರಾಯರ ಹೆಸರಿನಲ್ಲಿ ನಿರ್ಮಿಸುತ್ತಿರುವ ಕಂದಗಲ್ಲ ಹನಮಂತರಾಯ ರಂಗ ಮಂದಿರ ಕಳೆದ 20 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಈಗಲೂ ಇದು ಅಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ರಂಗ ಮಂದಿರದ ಮುಂದುವರಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಬಹುದಿನಗಳ ಕಲಾವಿದರ ಕನಸು ನನಸು ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಹೇಮಾವತಿ ಹೇಳಿದರು.
Related Articles
Advertisement
ಕುಳಗೇರಿ ಕ್ರಾಸ್: ರಕ್ತದಲ್ಲಿ ಆನೆಕಾಲು ರೋಗ ಉಂಟು ಮಾಡುವ ಸೂಕ್ಷ್ಮ ಜೀವಾಣುಗಳಿರುವ ಸಾಧ್ಯತೆ ಹೆಚ್ಚಾಗಿದೆ. ಡಿಇಸಿ ಮತ್ತು ಅಲ್ಪೆಂಪೆಂಡ್‌ಜೋಲ್ ಮಾತ್ರೆ ಸೇವಿಸಿದರೆ ಮಾತ್ರ ಈ ರೋಗ ತಡೆಯಲು ಸಾಧ್ಯ ಎಂದು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ| ಶಶಿರೇಖಾ ಹಲಗಲಿಮಠ ಹೇಳಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ಮಾತ್ರೆ ಸೇವನೆ ಮಾಡಿಸುವ ಮೂಲಕ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಆನೆಕಾಲು ರೋಗ ಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದೆ. ವೈದ್ಯರ ಸಲಹೆ ಪಡೆದು ಪ್ರತಿಯೊಬ್ಬರು ವರ್ಷದಲ್ಲಿ ಒಂದು ಬಾರಿ ಈ ಮಾತ್ರೆಗಳನ್ನ ನುಂಗುವ ಮೂಲಕ ರೋಗ ಹರಡದಂತೆ ತಡೆಯಬಹುದು ಎಂದರು.
ಹಿರಿಯ ಆರೋಗ್ಯ ಸಹಾಯಕ ಅಶೋಕ ತಿಮ್ಮಾಪುರ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಸ್ವಚ್ಛತೆ ಕಾಪಾಡಿಕೊಂಡು ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಸೊಳ್ಳೆ ಕಚ್ಚದಂತೆ ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ಸಹಾಯಕರಾದ ಜಾಧವ, ಬಿ ಎಸ್ ಎತ್ತಿನಮನಿ, ಯಲ್ಲಮ್ಮ ನರಗುಂದ, ರೇಣುಕಾ ಪೂಜಾರ ಇದ್ದರು.