ಭಾಲ್ಕಿ: ತಾಲೂಕಿನ ದಾಡಗಿ ಗ್ರಾಮದಲ್ಲಿ ರವಿವಾರ ನಡೆಯಬೇಕಿದ್ದ ಬಾಲ್ಯ ವಿವಾಹದ ಮಾಹಿತಿ ಮಾಹಿತಿ ಕಲೆ ಹಾಕಿದ ಅಧಿ ಕಾರಿಗಳು ಶನಿವಾರ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಪ್ರೌಢಶಾಲೆಯೊಂದರಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯ ಬಾಲ್ಯವಿವಾಹ ರವಿವಾರ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಮಾಡಲು ನಿಶ್ಚಯಿಸಲಾಗಿತ್ತು. ಇದನ್ನರಿತ ಶಿಶು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಬೆಳಗುಂಪಿ, ಮಕ್ಕಳ ರಕ್ಷಣಾಧಿಕಾರಿ ಪ್ರಕಾಶ ಬಿರಾದಾರ ತಂಡ ಬಾಲಕಿ ಮನೆಗೆ ತೆರಳಿ, ಬಾಲಕಿಯ ತಂದೆ ಸಂತೋಷ ಹುಣಸನಾಳೆ ಮತ್ತು ತಾಯಿ ಅರ್ಚನಾ ಸಂತೋಷ ಅವರಿಗೆ ತಿಳಿಸಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಾಲ್ಯ ವಿವಾಹ ತಡೆದಿದ್ದಾರೆ. ಈ ವೇಳೆ ಗ್ರಾಪಂ ಅಧ್ಯಕ್ಷ ಸಿದ್ರಾಮ ಪಾಟೀಲ, ಧನರಾಜ ಬಿರಾದಾರ, ಮಹಾದೇವ ಹುಣಸನಾಳೆ, ಪೊಲೀಸ್ ಪೇದೆ ರಾಜನಾಳೆ, ಶಿಶು ಅಭಿವೃದ್ಧಿ ಅಧಿ ಕಾರಿ ಕಚೇರಿ ಮೇಲ್ವಿಚಾರಕಿ ವಿಜಯಲಕೀಕ್ಷ್ಮೀ ಮಕ್ಕಳ ಸಹಾಯವಾಣಿ ಸಂಯೋಜಕ
ಸೂರ್ಯಕಾಂತ ಇದ್ದರು.