Advertisement
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ, ಆರೋಗ್ಯಾಧಿಕಾರಿ ಸುಶೀಲಕುಮಾರ ಅಂಬರೆ, ಕಡಗಂಚಿ ವೈದ್ಯಾಧಿಕಾರಿ ರಮೇಶ ಪಾಟೀಲ, ಹಳ್ಳಿಸಲಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪೂಜಾರಿ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿತು.
Related Articles
Advertisement
ಬಳಿಕ ಆರೋಗ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ಸಲಹೆ ನೀಡಿದರು. ಹೆಚ್ಚು ರೋಗಿಗಳು ಬಂದರೆ ಶಾಲೆ ಕೋಣೆಗಳನ್ನು ಬಳಸಿ ಚಿಕಿತ್ಸೆ ನೀಡಬೇಕು ಎಂದು ತಾಪಂ ಇಒ ಸೂಚಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಚಂದ್ರಮೌಳಿ ಅವರಿಗೆ ಇನ್ನೊಂದು ಕೊಳವೆ ಬಾವಿ ತೋಡಿ ನೀರು ಪೂರೈಕೆ ಮಾಡಬೇಕು ಎಂದು ಸೂಚನೆ ನೀಡದರು. ಮಳೆಗಾಲದಲ್ಲಿ ನೀರು ಕಾಯಿಸಿ ಆರಿಸಿ ಕುಡಿಯಲು ಜನರಿಗೆ ಸಲಹೆ ನೀಡಿದರು.
ಗ್ರಾಪಂ ಸದಸ್ಯ ಶ್ರೀಶೈಲ ಬಿರಾದಾರ, ಗ್ರಾಮದ ಗುರುಬಸಪ್ಪ ಭೂತೆ, ಜಗನ್ನಾಥ ಉಜಳಂಬೆ, ಮಲ್ಲಿಕಾರ್ಜುನ ಬೋಳಣಿ ಮತ್ತಿತರರು ಉಪಸ್ಥಿತರಿದ್ದರು. ಸೋಮವಾರ ಹೊಸದಾಗಿ ವಾಂತಿ ಭೇದಿ ಪ್ರಕರಣ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.