Advertisement

ಕೃಷಿ ಇಲಾಖೆ ಜಾರಿದಳ ಅಧಿಕಾರಿಗಳ ಭೇಟಿ

02:27 PM Aug 07, 2020 | Suhan S |

ನರಗುಂದ: ಗದಗ ಜಂಟಿ ಕೃಷಿ ನಿರ್ದೇಶಕರ ಕಚೇರಿ ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲ ಗುರುವಾರ ತಾಲೂಕಿಗೆ ಭೇಟಿ ನೀಡಿ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳನ್ನು ಪರಿಶೀಲಿಸಿದರು.

Advertisement

ಈ ವೇಳೆ ರಸಗೊಬ್ಬರ ದಾಸ್ತಾನು ಪುಸ್ತಕ, ರಶೀದಿ ಇತ್ಯಾದಿ ಪರಿಶೀಲಿಸಿ ರಸಗೊಬ್ಬರ ವಿತರಣೆ ಕಡ್ಡಾಯವಾಗಿ ಪಿಓಎಸ್‌ ಮಶೀನ್‌ ಮೂಲಕ ಮಾಡಬೇಕೆಂದು ಸೂಚಿಸಿದರು. ಯೂರಿಯಾ ಗೊಬ್ಬರ ನಿಗದಿತ ದರದಲ್ಲಿ ಎಲ್ಲ ರೈತರಿಗೂ ಸರಿಯಾಗಿ ಒದಗಿಸಬೇಕು. ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು. ರಸಗೊಬ್ಬರ ಲಭ್ಯತೆ ದರಪಟ್ಟಿ ಕಡ್ಡಾಯವಾಗಿ ಮಳಿಗೆಯಲ್ಲಿ ಹಾಕಬೇಕು. ನೊಂದಾಯಿತವಲ್ಲದ ಯಾವುದೇ ಕೃಷಿ ಪರಿಕರ ಮಾರಾಟ ಮಾಡಬಾರದು. ಮಾರಾಟಗಾರರು ಮತ್ತು ರೈತರು ಸಾಮಾಜಿಕ ಅಂತರ ಕಾಯ್ದಕೊಂಡು ಮಾಸ್ಕ್-ಸ್ಯಾನಿಟೈಸರ್‌ ಬಳಸಬೇಕು ಎಂದರು.

ರಸಗೊಬ್ಬರ ಮಾರಾಟ ಮಳಿಗೆಯವರು ಕಾನೂನು ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಸೂಕ್ತ ಕಾನೂನು ಕ್ರಮ್ನ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next