Advertisement
ತಾಲೂಕಿನ 29 ಇಲಾಖೆ ಮುಖ್ಯಸ್ಥರು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯ ಮೈಸೂರಿನಿಂದ ನೇರವಾಗಿ ವೀಡಿಯೊ ಕಾನ್ಪರೆನ್ಸ್ ಮೂಲಕ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ತರಬೇತಿಯಲ್ಲಿ ಇಬ್ಬರು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದು, ಉಪಗ್ರಹ ಆಧಾರಿತ ತರಬೇತಿ ಖಾಲಿ ಕುರ್ಚಿಗಳಿಗೆ ಸೀಮಿತವಾಯಿತು.
Related Articles
Advertisement
ಸಿಇಓ ಸಭೆ ಕಾರಣವೇ?: ತಾಪಂಯಲ್ಲಿ ಜಿಪಂ ಸಿಇಒ ನಾಗರಾಜು ಅವರು, ಪಿಡಿಓ ಹಾಗೂ ನರೇಗಾ ಯೋಜನೆಯ 8 ಇಲಾಖೆಗಳ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಎಲ್ಲಾ ಪಂಚಾಯತಿ ಪಿಡಿಓ ಹಾಗೂ 8 ಇಲಾಖೆ ಮುಖ್ಯಸ್ಥರು ಹಾಜರಿದ್ದರು. ಆದರೆ ಕೆಲವು ಅಧಿಕಾರಿಗಳು ಸಿಇಓ ಸಭೆ ಎಂದು ಹೇಳಿ ತರಬೇತಿಗೆ ಗೈರಾಗಿದ್ದಾರೆ, ತರಬೇತಿಯಲ್ಲಿ ಭಾಗವಸಲು ಸಿಇಓ ಸಭೆ ಕಾರಣವಲ್ಲ ಎಂದು ಸಿಇಓ ತಿಳಿಸಿದ್ದಾರೆ.
ಇಂದಾದರೂ ಬನ್ನಿ : ಪಿಡಿಒ ಹಾಗೂ ಅಧಿಕಾರಿಗಳಿಗೆ ಸೆ.25 ರಿಂದ ಸೆ.27ರವರಗೆ ಉಪಗ್ರಹ ಆಧಾರಿತ ತರಬೇತಿ ನಡೆಯಲಿದ್ದು ಈಗಲಾದರೂ, ತರಬೇತಿ ಪಡೆದು ಸಾರ್ವಜನಿಕರ ಯೋಜನೆಗಳು ಕ್ರಮಬದ್ದವಾಗಿ ತಲುಪಲಿ ಎಂಬುದು ಸಾರ್ವಜನಿಕರ ಆಶಯ. ಸಾರ್ವಜನಿಕರ ಅನಕೂಲಕ್ಕಾಗಿ ಅಧಿಕಾರಿಗಳಿಗೆ ತರಬೇತಿ ಉಪಗ್ರಹ ಆಧಾರಿತ ತರಬೇತಿ ನೀಡಲು ಸರ್ಕಾರ ಮುಂದಾದರೆ, ಮೇಲಾಧಿಕಾರಿಗಳು ಯಾರು ನೋಡುವುದಿಲ್ಲ, ಕೇಳುವುದಿಲ್ಲ ಎಂದು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರತಿಕ್ರಿಯಿಸಿ ಉಪಗ್ರಹ ಆಧಾರಿತ ತರಬೇತಿಯ ಬಗ್ಗೆ ನನಗೆ ಮಾತಿಯಿಲ್ಲ. ಇದ್ದಿದ್ದರೆ, ಸಭೆ ಮುಂದೂಡಬಹುದಿತ್ತು. ಅಧಿಕಾರಿಗಳು ತರಬೇತಿಗೆ ಬರದಿರಲು ನಮ್ಮ ಸಭೆ ಕಾರಣವಲ್ಲ. ತರಬೇತಿಯ ಸ್ಥಳ ಪರಿಶೀಲಿಸಿ ಗೈರಾದವರಿಗೆ ನೋಟಿಸ್ ನೀಡುವಂತೆ ತಿಳಿಸಿದ್ದೇನೆ.-ನಾಗರಾಜು, ಜಿಪಂ ಸಿಇಒ * ಕೊಟ್ರೇಶ್. ಆರ್