Advertisement

ಅಧಿಕಾರಿ, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಆಕ್ರೋಶ

03:01 PM May 20, 2019 | Suhan S |

ಚನ್ನಪಟ್ಟಣ: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿ ಎರಡೂ ಬದಿ ವಿಸ್ತರಣೆ ಕಾಮಗಾರಿ ಕುಂಟುತ್ತ ಸಾಗಿದೆ. ಕಾಮಗಾರಿ ಆರಂಭವಾಗಿ ಹಲವು ತಿಂಗಳುಗಳೇ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

Advertisement

ಕೇಂದ್ರ ಸರ್ಕಾರದ ವಿಶೇಷ ಅನುದಾನದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಕಾಮಗಾರಿ ದೊಡ್ಡ ಮಟ್ಟದ್ದೇನಲ್ಲ. ಆದರೆ ಅಧಿಕಾರಿ ಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಲೇ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗುತ್ತಿದೆ.

ಮನಬಂದಂತೆ ಭೂಸ್ವಾಧೀನ: ರಸ್ತೆ ಬದಿ ವಿಸ್ತರಣೆಕಾಮಗಾರಿಗಾಗಿ ಅಧಿಕಾರಿಗಳು ತಮ್ಮ ಮನಬಂದಂತೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳುತ್ತಿವೆ. ಅಲ್ಲದೆ ಇನ್ನೂ ಕೆಲವು ಕಡೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗೆ ಮನಬಂದಂತೆ ಭೂಸ್ವಾಧೀನ ಪಡಿಸಿಕೊಂಡಿದ್ದರಿಂದ ಕೆಲ ಸ್ಥಳೀಯರು ಅಧಿಕಾರಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪ್ರಕರಣಗಳು ಇನ್ನೂ ಕೋರ್ಟ್‌ ನಲ್ಲಿ ಇತ್ಯರ್ಥವಾಗಿಲ್ಲ. ಅಲ್ಲದೆ ಕೆಲವೆಡೆ ಅಗತ್ಯವಿಲ್ಲದಿದ್ದರೂ ಸರ್ಕಾರಿ ಜಾಗ ಇದ್ದುದರಿಂದ ಮನಬಂದಂತೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಅಗತ್ಯವಿದ್ದರೂ ಕೆಲವೆಡೆ ಪ್ರಭಾವಿಗಳಿಂದಾಗಿ ಭೂಸ್ವಾಧೀನ ಪಡಿಸಿಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಡಾಂಬರೂ ಹಾಕಿಲ್ಲ:

ಸಾತನೂರು ವೃತ್ತದಿಂದಪೊಲೀಸ್‌ ಠಾಣೆವರೆಗೆ ಮತ್ತು ಠಾಣೆ ವೃತ್ತದಿಂದ ಮೈಸೂರು ಕಡೆಗಿನ 8ನೇ ಅಡ್ಡರಸ್ತೆವರೆಗೆ ಒಟ್ಟು 4ಕಿಮೀ ವಿಸ್ತಾರದಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ಜಲ್ಲಿಕಲ್ಲುಗಳನ್ನು ಹಾಕಿದ್ದರೆ, ಇನ್ನೂ ಕೆಲವೆಡೆ ರಸ್ತೆ ಕಿತ್ತು ಹಾಗೆ ಬಿಡಲಾಗಿದೆ. ಬಸ್‌ನಿಲ್ದಾಣದಿಂದ ಪೊಲೀಸ್‌ ಠಾಣೆವರೆಗೆ ಜಲ್ಲಿಕಲ್ಲು ಹಾಕಿ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಆದರೆ ರಸ್ತೆಗೆ ಡಾಂಬರು ಹಾಕುವ ಕೆಲಸ ನಡೆದಿಲ್ಲ ಎಂದು ಸಾರ್ವಜನಿಕರು ಕಾಮಗಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾತನೂರು ವೃತ್ತದಿಂದ ಬಸ್‌ ನಿಲ್ದಾಣದವರೆಗೆ ಮೈಸೂರು ಕಡೆಗೆ ರಸ್ತೆಯನ್ನು ಬಗೆಯುವ ಕೆಲಸವೇ ಆಗಿಲ್ಲ. ಇಲ್ಲಿ ತಿಂಗಳುಗಳ ಹಿಂದೆಯೇ ಚರಂಡಿನಿರ್ಮಾಣ ಕಾಮಗಾರಿ ಮುಕ್ತಾಯಗೊಳಿಸಲಾಗಿದೆ. ಆದರೆ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿಲ್ಲ. ಇನ್ನು ಬೆಂಗಳೂರು ಕಡೆಗೆ ರಸ್ತೆಬಗೆದು ಜಲ್ಲಿ ಹಾಕಲಾಗಿದೆ. ಡಾಂಬರು ಹಾಕದೆ ಜಲ್ಲಿಯೇ ಮಾಯ ವಾಗುವ ಸಂಭವ ಇದೆ. ಆದರೂ ಡಾಂಬರು ಹಾಕುವ ಮನಸ್ಸನ್ನು ಗುತ್ತಿಗೆದಾರರು, ಅಧಿಕಾರಿಗಳು ಮಾಡಿಲ್ಲ.

Advertisement

ಅಪಘಾತ ಸಾಧ್ಯತೆಗಳು ಹೆಚ್ಚು: ಬಸ್‌ ನಿಲ್ದಾಣದಲ್ಲಿ ಜನರ ಓಡಾಟ ಹೆಚ್ಚಿರುವುದರಿಂದ, ಸಮೀಪದ ಕಾಮ ಗಾರಿ ಕೆಲಸವನ್ನು ಚುರುಕುಗೊಳಿಸಿ ಪೂರ್ಣಗೊಳಿಸ ಬೇಕಿತ್ತು. ಇದರಿಂದಾಗಿ ವಾಹನ ಸವಾರರು ಸುಗಮ ವಾಗಿ ಸಂಚರಿಸಲಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಜತೆಗೆ ಪಕ್ಕದಲ್ಲೇ ಹೆದ್ದಾರಿಯಿರುವುದರಿಮದ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಸಾತನೂರು ವೃತ್ತದಲ್ಲಿ ಸಾತನೂರು ರಸೆು¤ಂದ ಬೆಂಗಳೂರು ಕಡೆಗೆ ತಿರುವು ಪಡೆಯುವ

ಸ್ಥಳದಲ್ಲೇ ನೀರು ಸರಬರಾಜು ಮಾಡುವ ವಾಲ್‌ ಸ್ಥಳಾಂತರ ಮಾಡವ ಕೆಲಸವಾಗಿಲ್ಲ. ಷೇರೂ ಹೋಟೆಲ್‌ ವೃತ್ತದಲ್ಲಿ ಬೆಂಗಳೂರು ಕಡೆಗೆ ವಿಸ್ತರಣೆ ಮಾಡಲಾಗಿಲ್ಲ. ಬೆಂಗಳೂರು ದರ್ಗಾಗೆ ಹೋಗುವ ರಸ್ತೆ ಯಿಂದ ಹನುಮಂತನಗರದವರೆಗೆ ಕಾಮಗಾರಿಆರಂಭಿಸಿಲ್ಲ ಎಂಬ ನಾಗರಿಕರು ಆರೋಪಿಸಿದ್ದಾರೆ.

ಭೂ ಸ್ವಾಧೀನ ಪ್ರಕ್ರಿಯೆಗೆ ಸಮಸ್ಯೆ: ಪೊಲೀಸ್‌ ಠಾಣೆ ವೃತ್ತದಿಂದ ಮೈಸೂರು ಕಡೆಗೆ ನಾಲ್ಕೆದು ಸ್ಥಳಗಳಲ್ಲಿ ಭೂ ಸ್ವಾಧೀನಕ್ಕೆ ಸಮಸ್ಯೆ ಎದುರಾಗಿದೆ. ಈ ಸ್ಥಳಗಳಲ್ಲಿಕಟ್ಟಡ ತೆರವು, ಚರಂಡಿ ಕಾಮಗಾರಿ ನಡೆಯಬೇಕಿದೆ. ಕೆಲವೆಡೆ ಚರಂಡಿ ಕಾಮಗಾರಿ ಮುಗಿದಿದ್ದರೂ, ಜಲ್ಲಿ ಕಲ್ಲು ಹಾಕುವ ಕೆಲಸವಾಗಿಲ್ಲ. ಜಲ್ಲಿಕಲ್ಲು ಹಾಕಿರುವೆಡೆ ಡಾಂಬರು ಹಾಕಿಲ್ಲ. 10ನೇ ಅಡ್ಡರಸೆಯಿಂದಸ್ವಲ್ಪದೂರ ಹೆದ್ದಾರಿ ವಿಸ್ತರಣೆಯಾಗಿದ್ದು, ಸಿದ್ಧಾಸ್‌ ಎದುರು ಜಲ್ಲಿ ಹಾಕಿ ಬಿಡಲಾಗಿದೆ. ಅದರ ಮುಂದಕ್ಕೆ ಸಿಪಿಆರ್‌ ಪೆಟ್ರೋಲಿಯಂ ವರೆಗೆ ವಿಸ್ತರಣೆಯಾಗಿಲ್ಲ. ಇನ್ನು ಬೆಂಗಳೂರು ಕಡೆಗೆ ಎಲ್‌ಐಸಿ ಬಳಿಯಿಂದಮಂಗಳವಾರಪೇಟೆ ಗುಂಡುತೋಪು ವರೆಗೆ ಜಲ್ಲಿ ಹಾಕಿ ತಿಂಗಳುಗಳೇ ಆಗಿವೆ. ಎರಡನೇ ಅಡ್ಡರಸ್ತೆ ಎದುರು ಕಟ್ಟಡದ ವಿವಾದ ನ್ಯಾಯಾಲಯ ದಲ್ಲಿರುವುದರಿಂದ ತೆರವು ಮಾಡಿಲ್ಲ, ಹಾಗಾಗಿಅಲ್ಲಿಯೂ ಕಾಮಗಾರಿ ಆರಂಭಗೊಂಡಿಲ್ಲ. ಬಹುತೇಕ ಕಡೆಗಳಲ್ಲಿ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಹಾಗಾಗಿ ಸಂಚಾರಕ್ಕೂ ಸಹಸಮಸ್ಯೆಯಾಗಿದೆ. ಡಾಂಬರು ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಗುತ್ತಿಗೆದಾರರು, ಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ. ಅವಧಿ ಮುಗಿಯುತ್ತಿದ್ದರೂ ಕಾಮಗಾರಿ ಪೂರ್ತಿಯಾಗಿಲ್ಲ. ಇನ್ನಾದರೂ ಸಂಬಂಧಪಟ್ಟವರು ಕಾಮಗಾರಿಯನ್ನುಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

●ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next