Advertisement
ಕೋವಿಡ್ 19 ಸಮಯದಲ್ಲಿ ಈಗಾಗಲೇ ಅಗತ್ಯ ಸೇವೆಗಳಾದ ಆರೋಗ್ಯ ವೈದ್ಯಕೀಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ,ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ವಾರ್ತಾ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ಕೃಷಿ, ಕಾರ್ಮಿಕ, ತೋಟಗಾರಿಕೆ ಮೊದಲಾದ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಎಲ್ಲ ಸರಕಾರಿ ಕಚೇರಿಗಳು ತೆರೆಯಲಿವೆ. ಸರಕಾರಿ ಕಚೇರಿಗಳು ಕಾರ್ಯಾರಂಭಿಸುವಾಗ ಎಷ್ಟು ಮಂದಿ ಹಾಜರಾಗಬೇಕೆಂಬ ಬಗ್ಗೆ ಆಯಾ ಇಲಾಖೆಯ ಮುಖ್ಯಸ್ಥರು ನಿರ್ಧರಿಸಲ್ಲಿದ್ದು ಸಾರ್ವಜನಿಕರಿಗೆ ಯಾವುದೇ ಕಚೇರಿ ಕೆಲಸಗಳು ಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಉಡುಪಿ: ಕೋವಿಡ್ 19 ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ಬೀಡಿ ಉದ್ಯಮ ದ.ಕ. ಜಿಲ್ಲೆಯಲ್ಲಿ ಎ. 20ರಿಂದ ಪುನರಾರಂಭಗೊಳ್ಳಲಿದೆ. ಆದರೆ ಉಡುಪಿಯಲ್ಲಿ ಆರಂಭವಾಗುವ ಸಾಧ್ಯತೆ ಇಲ್ಲ. ದಕ್ಷಿಣ ಕನ್ನಡಲ್ಲಿ ಬೀಡಿ ಮಾಲಕರು, ಕಂಟ್ರಾಕ್ಟ್ ದಾರರು, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡಲು ಬೀಡಿ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ. ಆದುದರಿಂದ ಸೋಮವಾರದಿಂದ ಅಲ್ಲಿ ಬೀಡಿ ಕೆಲಸ ಆರಂಭವಾಗಲಿದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಆಗಿಲ್ಲ.
Related Articles
Advertisement
ಬೀಡಿ ಆರಂಭಿಸುವ ಕುರಿತಂತೆ ಸಚಿವರ ಹೇಳಿಕೆ ಬಿಟ್ಟರೆ ಬೇರೆ ಯಾವುದೇ ಆದೇಶ ಹೊರಬಿದ್ದಿಲ್ಲ. ಹೀಗಾಗಿ ಎ.20ರಂದು ಆರಂಭವಾಗುವುದು ಅನುಮಾನವಿದೆ ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷ ಮಹಾಬಲ ವಡೇರಹೋಬಳಿ ತಿಳಿಸಿದ್ದಾರೆ.
ಆದೇಶ ಬಂದಿಲ್ಲಜಿಲ್ಲೆಯಲ್ಲಿ ಬೀಡಿ ಉದ್ಯಮ ಆರಂಭಿಸುವ ಬಗ್ಗೆ ಇದುವರೆಗೆ ಯಾವುದೇ ಆದೇಶಗಳು ಕಚೇರಿಗೆ ಬಂದಿಲ್ಲ.ನೆರೆಯ ದ.ಕ. ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ತಿಳಿದುಕೊಂಡಿದ್ದೇನೆ.ನಮ್ಮ ಉಡುಪಿ ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ .
-ಜಿ.ಜಗದೀಶ್,
ಜಿಲ್ಲಾಧಿಕಾರಿಗಳು, ಉಡುಪಿ