Advertisement
ತಾಲೂಕಿನ ರಬಕವಿಯ ಅಣ್ಣಪ್ಪ ಚಾಪಿ ಎಂಬುವರ ಮಗ ಗುರುವಿಗೆ ಸ್ಯಾಮ್‌ಸಂಗ್ ಸೆಮಿ ಕಂಡಕ್ಟರ್ ಇಂಡಿಯಾ ರಿಸರ್ಚ್(ಎಸ್‌ಎಸ್‌ಐಆರ್)ನಿಂದ ವಾರ್ಷಿಕ 21.35 ಲಕ್ಷ ರೂ. ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಪಡೆದಿರುವುದು ದಾಖಲೆಯಾಗಿದೆ.
Related Articles
Advertisement
ನೇಕಾರ ಮಾಲಿಕ ನೆರವು: ಬಿಇ ಪ್ರವೇಶಾತಿ ಪಡೆಯುವ ವೇಳೆ ಒಟ್ಟು ನಾಲ್ಕೈದು ಲಕ್ಷ ರೂ.ಗಳ ವೆಚ್ಚವಾಗುವುದರಿಂದ ಕೂಲಿ ನೇಕಾರಿಕೆ ಮಾಡುತ್ತಿದ್ದ ವಿದ್ಯಾರ್ಥಿ ತಂದೆ ಅಣ್ಣಪ್ಪ ಚಾಪಿಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದ್ದನ್ನು ವಿದ್ಯಾರ್ಥಿ ಸ್ಮರಿಸಿದ್ದಾನೆ.
ನೇಕಾರ ಸಮುದಾಯದಲ್ಲಿ ಅದರಲ್ಲೂ ಜೋಡಣೆದಾರರ ಕುಟುಂಬದಲ್ಲಿ ಶಿಕ್ಷಣ ಹಾಗೂ ಆಸ್ಪತ್ರೆಗೆಂದು ಹಣಕಾಸು ನೆರವು ನೀಡುವಲ್ಲಿ ಸಹಕಾರಿಯಾಗುವುದು ಮಾನವೀಯ ಧರ್ಮ. -ಚಿದಾನಂದ ಬೆಳಗಲಿ, ಜವಳಿ ಉದ್ಯಮಿ
ವಿದ್ಯಾರ್ಥಿಗಳು ಸಾಧನೆ ಮಾಡಲು ಸ್ವತಂತ್ರವಾಗಿ ಹಾಗೂ ಏನನ್ನು ಕಲಿಯಲೆತ್ನಿಸುವರೋ ಅದಕ್ಕೆ ಸಹಕಾರಿಯಾದಲ್ಲಿ ಸಾಧನೆ ನಿಶ್ಚಿತ. –ಗುರು ಚಾಪಿ, ಕ್ಯಾಂಪಸ್ ಸಾಧಕ ವಿದ್ಯಾರ್ಥಿ