Advertisement

“ನೀಟ್‌’ಗಾಗಿ ಆಫ‌ರ್‌ 

06:00 AM May 05, 2018 | |

ಚೆನ್ನೈ: ನೀಟ್‌ ಪರೀಕ್ಷೆ ಬರೆಯಲು ಬೇರೆ ರಾಜ್ಯಕ್ಕೆ ಹೋಗುವ ಪ್ರತಿಯೊಬ್ಬ ತಮಿಳುನಾಡು ವಿದ್ಯಾರ್ಥಿಗೆ 1 ಸಾವಿರ ರೂ. ಆರ್ಥಿಕ ನೆರವಿಗೆ ಜೊತೆಗೆ ರೈಲ್ವೆ ಟಿಕೆಟ್‌ನ ಹಣವನ್ನೂ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಅಷ್ಟೇ ಅಲ್ಲ, ಪರೀಕ್ಷಾರ್ಥಿ ಜತೆಗೆ ತೆರಳುವ ಒಬ್ಬ ವ್ಯಕ್ತಿಗೆ ಸೆಕೆಂಡ್‌ ಕ್ಲಾಸ್‌ ರೈಲ್ವೆ ಟಿಕೆಟ್‌ ದರವನ್ನು ನೀಡುವುದಾಗಿ ಸಿಎಂ ಪಳನಿಸ್ವಾಮಿ ಶುಕ್ರವಾರ ತಿಳಿಸಿದ್ದಾರೆ. ಸುಮಾರು 200 ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ತೆರಳುವ ಕಾರಣ, ಅವರ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಪಿಎಂಕೆ ಆಗ್ರಹಿಸಿದ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಲಾಗಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next