Advertisement
ಈ ವರ್ಷದ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಖ್ಯಾತಿಯ ಫೆಡರರ್ ದ್ವಿತೀಯ ಸುತ್ತಿನ ಪಂದ್ಯ ದಲ್ಲಿ ರಶ್ಯದ ಮಿಖೈಲ್ ಯೂಜ್ನಿ ವಿರುದ್ಧ 6-1, 6-7 (3-7), 4-6, 6-4, 6-2 ಅಂತರದಿಂದ ಗೆಲುವು ಕಂಡರು. ಇದ ರೊಂದಿಗೆ ಯೂಜ್ನಿ ವಿರುದ್ಧ ತಮ್ಮ ಅಜೇಯ ಓಟವನ್ನು ಮುಂದುವರಿಸಿದರು. ಯೂಜ್ನಿ ವಿರುದ್ಧ ಆಡಿದ ಎಲ್ಲ 17 ಪಂದ್ಯಗಳಲ್ಲೂ ಫೆಡರರ್ ಗೆಲುವನ್ನು ಒಲಿಸಿಕೊಂಡಿದ್ದಾರೆ.
Related Articles
Advertisement
ಡಿಮಿಟ್ರೋವ್ ನಿರ್ಗಮನ: ವಿಶ್ವ ಟೆನಿಸ್‌ನಲ್ಲಿ ಯುವ ಗಾಳಿ ಬೀಸುತ್ತಿದೆ ಎಂಬುದಕ್ಕೆ ರಶ್ಯದ 19ರ ಹರೆಯದ ಆ್ಯಂಡ್ರೆ ರುಬ್ಲೇವ್ ಸಾಕ್ಷಿಯಾದರು. ಅಮೋಘ ಪ್ರದರ್ಶನವಿತ್ತ ಅವರು 7ನೇ ಶ್ರೇಯಾಂಕಿತ ಬಲ್ಗೇರಿಯದ ಆಟಗಾರ ಗ್ರಿಗರ್ ಡಿಮಿಟ್ರೋವ್‌ಗೆ 7-5, 7-6 (3), 6-3 ಅಂತರದ ಸೋಲುಣಿಸಿದರು. ಜೆಕ್ ಗಣರಾಜ್ಯದ 15ನೇ ಶ್ರೇಯಾಂಕಿತ ಥಾಮಸ್ ಬೆರ್ಡಿಶ್ ಕೂಡ 2ನೇ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ. ಅವರನ್ನು ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್ 3-6, 6-1, 7-6 (7-5), 6-2 ಅಂತರದಿಂದ ಪರಾಭವಗೊಳಿಸಿದರು.
ಡೊಮಿನಿಕ್ ಥೀಮ್, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ, ಗೇಲ್ ಮಾನ್‌ಫಿಲ್ಸ್, ಅಡ್ರಿಯನ್ ಮನ್ನಾರಿನೊ, ಡೇವಿಡ್ ಗೊಫಿನ್ ಅವರೆಲ್ಲ ಪುರುಷರ ಸಿಂಗಲ್ಸ್ ವಿಭಾಗದಿಂದ 3ನೇ ಸುತ್ತು ತಲುಪಿದ ಪ್ರಮುಖರು.
“ಎಲ್ಲ ಪಂದ್ಯಗಳೂ ಅತ್ಯಂತ ಕಠಿನವಾಗಿ ಸಾಗುತ್ತಿವೆ. ಕಾರಣ. ಇಲ್ಲಿ ಎಲ್ಲರೂ ಅತ್ಯುತ್ತಮ ಪ್ರದರ್ಶನ ನೀಡಲು ಹಾತೊರೆ ಯುತ್ತಾರೆ. ನಾನಿಲ್ಲಿ ಅಷ್ಟೇನೂ ಉತ್ತಮ ಆಟವಾಡಲಿಲ್ಲ…’ನಡಾಲ್