Advertisement

ಉತ್ತರದಲ್ಲೇ ಹೆಚ್ಚು ಗನ್‌ ಸದ್ದು

06:50 AM Oct 03, 2017 | |

ಹೊಸದಿಲ್ಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಮೊರೆತಕ್ಕೆ ಮುಕ್ತಿಯೇ ಇಲ್ಲ. ಅಲ್ಲಿನ ಜನರಿಗೆ ಬೆಳಗಾಗುವುದು ಗುಂಡಿನ ಸದ್ದು ಕೇಳಿದ ನಂತರವೇ ಎಂಬ ಸ್ಥಿತಿ ಇದೆ. ಇಂಥ ಅಸುರಕ್ಷಿತ ರಾಜ್ಯದಲ್ಲಿ ಅತಿ ಹೆಚ್ಚು ಮಂದಿ ಬಂದೂಕು ಹೊಂದಲು ಪರವಾನಗಿ ಪಡೆದಿರಬಹುದು ಎಂಬುದು ಸಹಜ ಊಹೆ. ಈ ಬಗ್ಗೆ ಯಾರನ್ನೇ ಕೇಳಿದರೂ ಇರಬಹುದು ಅನ್ನುತ್ತಾರೆ.

Advertisement

ಆದರೆ ಅಸಲಿ ಸಂಗತಿ ಏನೆಂದರೆ, ಭಾರತದಲ್ಲಿ ಬಂದೂಕು ಹೊಂದಲು ಪರವಾನಗಿ ಪಡೆದಿರುವ ಅತಿ ಹೆಚ್ಚು ಮಂದಿ ಇರುವುದು ಉತ್ತರ ಪ್ರದೇಶದಲ್ಲಿ. ಇಲ್ಲಿ ಸುಮಾರು 12.77 ಲಕ್ಷ ಮಂದಿ ಗನ್‌ ಲೈಸೆನ್ಸ್‌ ಪಡೆದಿದ್ದಾರೆ. ಆದರೆ ಕಳೆದ 3 ದಶಕಗಳಿಂದ ರಕ್ತಪಾತ, ಹಿಂಸಾ ಕೃತ್ಯಗಳಿಗೆ ಸಾಕ್ಷಿಯಾಗಿರುವ ಕಣಿವೆ ರಾಜ್ಯದಲ್ಲಿ ಕೇವಲ 3.69 ಲಕ್ಷ ಮಂದಿ ಗನ್‌ ಪರವಾನಗಿ ಪಡೆದಿದ್ದಾರೆ.

ದೇಶದಲ್ಲಿ ಒಟ್ಟು 33.69 ಲಕ್ಷ ಸಕ್ರಿಯ ಗನ್‌ ಪರವಾನಗಿಗಳನ್ನು ನೀಡಲಾಗಿದೆ. ಈ ಪೈಕಿ ಅತ್ಯಧಿಕ ಅಂದರೆ 12.77 ಲಕ್ಷ ಗನ್‌ ಲೈಸೆನ್ಸ್‌ ಪಡೆದಿರುವುದು ಉತ್ತರಪ್ರದೇಶ ದವರು. ಇನ್ನು ಕರ್ನಾಟಕ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, 1.13 ಲಕ್ಷ ಲೈಸೆನ್ಸ್‌ ಪಡೆದಿದೆ. ಈ ಮೂಲಕ ನೆರೆಯ ಮಹಾರಾಷ್ಟ್ರವನ್ನು (84,050) ರಾಜ್ಯ ಹಿಂದಿಕ್ಕಿದೆ. ಕರ್ನಾಟಕಕ್ಕೆ ಹೋಲಿಸಿದರೆ ಗನ್‌ ಪರವಾನಗಿಯಲ್ಲಿ ತಮಿಳುನಾಡು ತೀರಾ ಹಿಂದಿದ್ದು, ಇಲ್ಲಿ ಕೇವಲ 22,532 ಗನ್‌ ಪಡೆಯಲಾಗಿದೆೆ. ಕೇವಲ 9,459 ಗನ್‌ ಲೈಸೆನ್ಸ್‌ ನೀಡಿರುವ ಕೇರಳ ಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿದೆ. ವಿಶೇಷವೆಂದರೆ ಕೇಂದ್ರಾಡಳಿತ ಪ್ರದೇಶಗಳಾದ ದಮನ್‌ ಮತ್ತು ದಿಯೂ, ದಾದರ್‌ ಮತ್ತು ನಗರ್‌ನಲ್ಲಿ ವಿತರಿಸಿರುವುದು ತಲಾ 125 ಗನ್‌ ಲೈಸೆನ್ಸ್‌ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next