Advertisement

ನ. 23ರಂದು ನಗರ ಸ್ಥಳೀಯ ಸಂಸ್ಥೆಗಳ 43 ವಾರ್ಡ್‌, ಗ್ರಾ.ಪಂ. 641 ಸ್ಥಾನಕ್ಕೆ ಚುನಾವಣೆ

01:02 AM Oct 19, 2024 | Team Udayavani |

ಬೆಂಗಳೂರು: ದಾವಣಗೆರೆ ಮತ್ತು ವಿಜಯಪುರ ಮಹಾನಗರ ಪಾಲಿಕೆಯ ತಲಾ 1 ವಾರ್ಡ್‌ ಸೇರಿ ರಾಜ್ಯದ ಸ್ಥಳೀಯ ನಗರ ಸಭೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಒಟ್ಟು 43 ವಾರ್ಡ್‌ಗಳಿಗೆ ನವೆಂಬರ್‌ 23ರಂದು ಮತದಾನ ನಡೆಯಲಿದೆ.

Advertisement

ರಾಜ್ಯ ಚುನಾವಣ ಆಯೋಗವು ತೆರವಾದ ಸ್ಥಾನಗಳ ಉಪಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದು ನವೆಂಬರ್‌ 4ಕ್ಕೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಲಿದ್ದಾರೆ. ನ. 11 ನಾಮಪತ್ರ ಸಲ್ಲಿಸಲು ಕೊನೆಯ ದಿನ, ನ. 12 ನಾಮಪತ್ರಗಳ ಪರಿಶೀಲನೆ, ನ. 14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರಲಿದೆ.

ನವೆಂಬರ್‌ 23ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ, ಅವಶ್ಯವಿದ್ದಲ್ಲಿ ನ. 25ರಂದು ಮರು ಮತದಾನ ಮತ್ತು ನ. 26ರಂದು ಮತಗಳ ಎಣಿಕೆ ನಡೆದು ಫ‌ಲಿತಾಂಶ ಪ್ರಕಟಗೊಳ್ಳಲಿದೆ.ನೀತಿ ಸಂಹಿತೆಯು ನ. 4ರಿಂದ ನ. 26ರವರೆಗೆ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರಲಿದೆ ಎಂದು ರಾಜ್ಯ ಚುನಾವಣ ಆಯೋಗ ತಿಳಿಸಿದೆ.

ಹಾಲಿ ಚಾಲ್ತಿಯಲ್ಲಿರುವ ವಿಧಾನ ಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಬೇಕು, ನೋಟಾ ಮತಕ್ಕೆ ಅವಕಾಶ ಕಲ್ಪಿಸಬೇಕು, ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಪ್ರಕಟಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

531 ಗ್ರಾ.ಪಂ.ಗಳ 641
ಸ್ಥಾನಗಳಿಗೂ ಚುನಾವಣೆ
ಬೆಂಗಳೂರು: ರಾಜ್ಯದ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಹಲವು ಕಾರಣಗಳಿಂದ ತೆರವಾಗಿರುವ ಹಾಗೂ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ನವೆಂಬರ್‌ 23ರಂದು ಉಪಚುನಾವಣೆ ಘೋಷಣೆಯಾಗಿದೆ.

Advertisement

ಅದರಂತೆ 31 ಜಿಲ್ಲೆಗಳ 195 ತಾಲೂಕುಗಳಲ್ಲಿರುವ 531 ಗ್ರಾ.ಪಂ.ಗಳಲ್ಲಿ ಒಟ್ಟು 641 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ದಕ್ಷಿಣ ಕನ್ನಡದ 30, ಉಡುಪಿಯ 10, ಕೊಡಗು 10, ಬೆಂಗಳೂರು ನಗರ ಜಿಲ್ಲೆಯ 13, ರಾಮನಗರ ಜಿಲ್ಲೆಯ 21, ಚಿಕ್ಕಬಳ್ಳಾಪುರ ಜಿಲ್ಲೆಯ 10, ಕೋಲಾರದ 16, ತುಮಕೂರಿನ 30, ಚಿತ್ರದುರ್ಗದಲ್ಲಿ 28, ದಾವಣಗೆರೆಯ 53, ಶಿವ ಮೊಗ್ಗ 19, ಮೈಸೂರು ಜಿಲ್ಲೆಯ 21, ಚಾಮರಾಜನಗರದ 11, ಹಾಸನದ 22, ಮಂಡ್ಯದ 31, ಚಿಕ್ಕಮಗಳೂರಿನ 16, ಬೆಳಗಾವಿಯ 43, ಬಾಗಲಕೋಟೆಯ 27, ಧಾರವಾಡದ 17, ವಿಜ ಯಪುರದ 15, ಗದಗದ 7, ಹಾವೇರಿಯ 17, ಉತ್ತರ ಕನ್ನಡದ 13, ಕಲಬುರಗಿಯ 30, ಬೀದ ರ್‌ನ 30, ವಿಜಯನಗರ 17, ರಾಯಚೂರು 30, ಕೊಪ್ಪಳ 19, ಯಾದಗಿರಿ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next