Advertisement

Elections: ವಿಧಾನ ಪರಿಷತ್‌ ಚುನಾವಣೆ; ಸಿದ್ಧತೆ ಪರಿಶೀಲನೆ

01:05 AM Oct 09, 2024 | Team Udayavani |

ಮಂಗಳೂರು: ವಿಧಾನ ಪರಿಷತ್‌ಗೆ ದ.ಕ. ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಉಪಚುನಾವಣೆ ಸಿದ್ಧತೆ ಯನ್ನು ಚುನಾವಣ ಆಯೋಗದ ವೀಕ್ಷಕ ಪಂಕಜ್‌ ಕುಮಾರ್‌ ಪಾಂಡೆ ಅವರು ಸೋಮವಾರ ಪರಿಶೀಲಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆೆ ನಡೆಸಿದ ಅವರು ಮತಗಟ್ಟೆಗಳ ಸಿದ್ಧತೆ, ಚುನಾವಣೆ ಸಿಬಂದಿಗಳ ನೇಮಕ, ಮತ ಪತ್ರಗಳ ಮುದ್ರಣ, ಮತದಾರರ ಪಟ್ಟಿ ಹಾಗೂ ಇತರ ಸಿದ್ಧತೆಗಳ ಮಾಹಿತಿ ಪಡೆದರು. ಮತಗಟ್ಟೆ ಸಿಬಂದಿಗೆ ತರಬೇತಿ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲೋಶಿಯಸ್‌ನಲ್ಲಿ ಮತ ಎಣಿಕೆ ಮತ ಎಣಿಕೆ ಸಂತ ಅಲೋಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ತಿಳಿಸಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6,032 ಮತದಾರರಿದ್ದಾರೆ. ಈ ಪೈಕಿ 3,127 ಮಹಿಳಾ ಮತದಾರರು ಹಾಗೂ 2,905 ಪುರುಷ ಮತದಾರರಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಜಿ. ಪಂ. ಸಿಇಒ ಡಾ| ಆನಂದ್‌ ಕೆ., ದ. ಕ. ಜಿಲ್ಲಾ ಎಸ್ಪಿ ಯತೀಶ್‌, ಉಡುಪಿ ಎಸ್ಪಿ ಅರುಣ್‌, ದ.ಕ. ಅಪರ ಡಿಸಿ ಡಾ| ಜಿ. ಸಂತೋಷ್‌ ಕುಮಾರ್‌, ಉಡುಪಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next