Advertisement

Mangalore: ನ. 4, 5- “ಅಖಿಲ ಭಾರತ ಕೊಂಕಣಿ” ಸಾಹಿತ್ಯ ಸಮ್ಮೇಳನ

12:24 AM Nov 03, 2023 | Team Udayavani |

ಮಂಗಳೂರು: ಅಖೀಲ ಭಾರತ ಕೊಂಕಣಿ ಪರಿಷತ್‌ ನೇತೃತ್ವದಲ್ಲಿ ನ. 4 ಮತ್ತು 5ರಂದು ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರದಲ್ಲಿ 25ನೇ ಅಖೀಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ಜರಗಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್‌. ಎಮ್‌. ಪೆರ್ನಾಲ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ನ. 4ರಂದು ಬೆಳಗ್ಗೆ 10ಕ್ಕೆ ವಿದ್ವಾಂಸ ಹಾಗೂ ವಿಮರ್ಶಕ ಉದಯನ್‌ ವಾಜಪೇಯಿ ಸಮ್ಮೇಳನ ಉದ್ಘಾಟಿಸಿ “ಸಾಹಿತ್ಯ ಮತ್ತು ಬದುಕು’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ. ಕಾದಂಬರಿಗಾರ್ತಿ ಹಾಗೂ ಕೊಂಕಣಿ ಚಳವಳಿಯ ಮುಂದಾಳು ಹೇಮಾ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 5.30ಕ್ಕೆ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಳೆ “ಸಮಕಾಲೀನ ಬರಹಗಾರಿಕೆಗೆ ಸವಾಲುಗಳ” ಕುರಿತು ಇಂಗ್ಲಿಷ್‌ನಲ್ಲಿ ಸಂವಾದ ನಡೆಸಲಿದ್ದಾರೆ ಎಂದರು.

ನ. 5ರ ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕನ್ನಡ ಸಾಹಿತಿ, ಪ್ರಾಧ್ಯಾಪಕಿ ಮಮತಾ ಜಿ. ಸಾಗರ “ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರಮುಖ ಉಪನ್ಯಾಸಗಳು ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿ ಇರಲಿದ್ದು, ಕೊಂಕಣಿಯೇತರ ಸಾಹಿತ್ಯಾಸಕ್ತರೂ ಭಾಗವಹಿಸಬಹುದು ಎಂದು ತಿಳಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್‌ ಡಿ’ಸೋಜಾ, ಉಪಾಧ್ಯಕ್ಷ ನಂದಗೋಪಾಲ ಶೆಣೈ, ಕಾರ್ಯದರ್ಶಿ ಟೈಟಸ್‌ ನೊರೊನ್ಹಾ, ಅಖೀಲ ಭಾರತೀಯ ಕೊಂಕಣಿ ಪರಿಷದ್‌ ಉಪಾಧ್ಯಕ್ಷ ಮೆಲ್ವಿನ್‌ ರಾಡ್ರಿಗಸ್‌, ಕಾರ್ಯಾಧ್ಯಕ್ಷ ಚೇತನ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next