Advertisement

ಜು. 27 ರಿಂದ  ಶ್ರೀ ಗುರುದೇವಾನಂದ ಶ್ರೀ ಮುಂಬಯಿ ಪ್ರವಾಸ

12:12 PM Jul 26, 2018 | |

ಮುಂಬಯಿ: ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಗಾಪುರ ಎಂದೇ ಪ್ರಸಿದ್ಧಿ ಪಡೆದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್‌ ಇದರ ಗುರುವರ್ಯರಾದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಪ್ರಸ್ತುತ ವರ್ಷದ ಮುಂಬಯಿ ಧಾರ್ಮಿಕ ಪ್ರವಾಸವು ಜು. 27 ರಿಂದ ಆ. 5 ರವರೆಗೆ ಜರಗಲಿದೆ.

Advertisement

ಮಹಾನಗರ ಸೇರಿದಂತೆ, ನವಿಮುಂಬಯಿ ಹಾಗೂ ಥಾಣೆ ಜಿಲ್ಲೆಗಳ ಭಕ್ತ ಸಮೂಹವನ್ನು ಆಶೀರ್ವದಿಸಲು ಅಗಮಿಸಲಿರುವ ಶ್ರೀಗಳು ಜು. 27 ರಂದು ಮುಂಬಯಿಗೆ ಚಿತ್ತೆ$çಸಲಿದ್ದಾರೆ. ಅಪರಾಹ್ನ 4 ರಿಂದ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಗುರುಪೂರ್ಣಿಮೆ ಆಚರಣೆಯ ಸಂದರ್ಭದಲ್ಲಿ ಭಕ್ತರಿಗೆ ಸಾರ್ವಜನಿಕ ದರ್ಶನದೊಂದಿಗೆ ಆಶೀರ್ವಚನ ನೀಡಲಿದ್ದಾರೆ. ಜು. 28 ರಂದು ಬೆಳಗ್ಗೆ ಮತ್ತು ಅಪರಾಹ್ನ ನವಿಮುಂಬಯಿಯಲ್ಲಿ ಪಾದುಕಾ ಪೂಜೆ, ಆಶೀರ್ವಚನ ನಡೆಯಲಿದೆ. ಜು. 29 ರಂದು ಬೆಳಗ್ಗೆ ನವಿಮುಂಬಯಿಯಲ್ಲಿ ಪಾದುಕಾ ಪೂಜೆ, ಸಂಜೆ 7.30 ರಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಸಭಾಗೃಹ, ಶ್ರೀ ಗಣಪತಿ, ಅಯ್ಯಪ್ಪ, ದುರ್ಗಾದೇವಿ ದೇವಸ್ಥಾನ, ನೆರೂಲ್‌ ಶ್ರೀ ಮಣಿಕಂಠ ಸೇವಾ ಸಂಘಂ, ಪ್ಲಾಟ್‌ ನಂಬರ್‌ 16, ನೆರೂಲ್‌ ಪೂರ್ವ, ನವಿಮುಂಬಯಿ ಇಲ್ಲಿ ಸಾರ್ವಜನಿಕ ಆಶೀರ್ವಚನ ನಡೆಯಲಿದೆ. ಜು. 30 ರಂದು ಸ್ವಾಮಿ ನಿತ್ಯಾನಂದ ಹಾಲ್‌, ಪ್ಲಾಟ್‌ ನಂ 6/ಬಿ, ರೋಡ್‌ ನಂಬರ್‌ 24, ಮುಖ್ಯ ಅಧ್ಯಾಪಕ ಭವನ, ಸಯಾನ್‌ ಪೂರ್ವ ಇಲ್ಲಿ ಬೆಳಗ್ಗೆ 10.30ಕ್ಕೆ  ಸಾರ್ವಜನಿಕ ಸಭೆ ನೆರವೇರಲಿದೆ.

ಜು. 31 ರಂದು ಬೆಳಗ್ಗೆ ಥಾಣೆಯಲ್ಲಿ ಪಾದುಕಾಪೂಜೆ, ಸಂಜೆ 7.30 ರಿಂದ ವುಡ್‌ಲ್ಯಾಂಡ್‌ ರಿಟ್ರೀಟ್‌ ಹೊಟೇಲ್‌, ರಹೇಜಾ ಗಾರ್ಡನ್‌ ಎದುರು, ಎಲ್‌ಬಿಎಸ್‌ ಮಾರ್ಗ ಥಾಣೆ ಇಲ್ಲಿ ಸಾರ್ವಜನಿಕ ಆಶೀರ್ವಚನ ಜರಗಲಿದೆ. ಆ. 1 ರಂದು ಬೆಳಗ್ಗೆ ಬೊರಿವಲಿಯಲ್ಲಿ ಪಾದುಕಾಪೂಜೆ, ಆಶೀರ್ವಚನ ಕಾರ್ಯಕ್ರಮವು ಆನಂದ ಶೆಟ್ಟಿ ಇವರ ನೇತೃತ್ವದಲ್ಲಿ ಭಾಯಂದರ್‌ ಪಶ್ಚಿಮ, ನವರಂಗ್‌ ಹೊಟೇಲ್‌ ಸಮೀಪ, ಕಮಲಾ ಪಾರ್ಕ್‌, ಡಿ/2, 5 ನೇ ಮಹಡಿ, 60 ಫೀಟ್‌ ರೋಡ್‌ ಸಮೀಪ, ಆ. 2 ರಂದು ಸಂಜೆ 6 ರಿಂದ ರಾತ್ರಿ 9 ರವರೆಗೆ ಪಿ. ಎ. ಶೆಟ್ಟಿ, ರಹೇಜಾ ಎಸ್ಟೇಟ್‌ ಪಾರ್ಕ್‌ ಪೆಸ್ಟ್‌-04, ಫ್ಲಾÂಟ್‌ ನಂಬರ್‌ 404, ಕುಲುಪ್‌ವಾಡಿ, ಬೊರಿವಲಿ ಪೂರ್ವ ಇಲ್ಲಿ ಸಾರ್ವಜನಿಕ ದರ್ಶನ ನಡೆಯಲಿದೆ.

ಆ. 3 ರಂದು ಬೆಳಗ್ಗೆ ಪಾದುಕಾಪೂಜೆ, ಸಂಜೆ 7.30 ರಿಂದ ಸಾರ್ವಜನಿಕ ದರ್ಶನ ಕಾರ್ಯಕ್ರಮವು ಶ್ರೀ ಮಹಾಲಕ್ಷಿ¾à ಭಜನ ಮಂಡಳಿ, ಮಹಾಲಕ್ಷಿ¾à ಕಾಲನಿ, ವೀರದೇಸಾಯಿ ರೋಡ್‌, ಅಂಧೇರಿ ಪಶ್ಚಿಮ, ಆ. 4 ರಂದು ಬೆಳಗ್ಗೆ ಪಾದುಕಾ ಪೂಜೆ, ಸಂಜೆ 6 ರಿಂದ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ, ಎ/701, ಮಹಾವೀರ್‌ ಪ್ಲಾಟಿನಂ ಘಾಟ್‌ಕೋಪರ್‌-ಮಾನ್‌ಖುದ್‌ì ಲಿಂಕ್‌ರೋಡ್‌, ಇಂಡಿಯನ್‌ ಆಯಿಲ್‌ ನಗರ ಹತ್ತಿರ, ಛೆಡ್ಡಾನಗರ ಚೆಂಬೂರು ಇಲ್ಲಿ ಶ್ರೀಗಳ ಸಾರ್ವಜನಿಕ ದರ್ಶನ ನಡೆಯಲಿದೆ.

ಆ. 5 ರಂದು ಬೆಳಗ್ಗೆ ಪಾದುಕಾ ಪೂಜೆ, ಅಪರಾಹ್ನ 2.30 ರಿಂದ ಬಂಟರ ಸಂಘ ಮುಂಬಯಿ ಇಲ್ಲಿ ಶ್ರೀ ಗುರುದೇವ ಸೇವಾ ಬಳಗದ ವಾರ್ಷಿಕೋತ್ಸವ ಸಂಭ್ರಮವು ಶ್ರೀಗಳ ಉಪಸ್ಥಿತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಂದ ಜರಗಲಿದೆ. ಪಾದಪೂಜೆ ಮಾಡಲಿಚ್ಛಿಸುವ ಭಕ್ತಾದಿಗಳು ಮುಂಚಿತವಾಗಿ ಬಳಗದ ಪದಾಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ನ್ಯಾಯವಾದಿ ಕೃಷ್ಣ ಎಲ್‌. ಶೆಟ್ಟಿ (9323264359), ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ (9821613229), ಬೊಳ್ನಾಡುಗುತ್ತು ಚಂದ್ರಹಾಸ ಎಂ. ಶೆಟ್ಟಿ (9892019999), ಭೋಜ ಶೆಟ್ಟಿ (9819333797), ಪೇಟೆಮನೆ ಪ್ರಕಾಶ್‌ ಶೆಟ್ಟಿ (9892435643), ರೇವತಿ ವಾಮಯ್ಯ ಶೆಟ್ಟಿ (9867321837) ಇವರನ್ನು ಸಂಪರ್ಕಿಸಬಹುದು.

Advertisement

ಜಗತ್ತಿನಾದ್ಯಂತ ಇರುವ ಒಡಿಯೂರಿನ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಮರಾಠಿ ಮಣ್ಣಿನಲ್ಲಿರುವ ಭಕ್ತ ಸಮೂಹವನ್ನು ಬಹಳಷ್ಟು ವರ್ಷಗಳಿಂದ ಸಾಮೀಪ್ಯದಲ್ಲಿ ಹರಸುತ್ತಾ ಬಂದವರು.  ಮಹಾನಗರದಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ, ಶ್ರೀ ಯುವ ಸೇವಾ ಬಳಗವನ್ನು ಭಕ್ತರ ಇಚ್ಛೆಯಂತೆ ಸ್ಥಾಪಿಸಿ ನಗರದಲ್ಲಿ ವಾಸ್ತವ್ಯವಿರುವ ಒಡಿಯೂರಿನ ಭಕ್ತರನ್ನು ಆಧ್ಯಾತ್ಮಿಕ ಪ್ರೇರಣಾಶಕ್ತಿಯಾಗಿರುವ ಅವಧೂತ ಶ್ರೀ  ಗುರುದೇವಾನಂದ ಸ್ವಾಮೀಜಿ ಅವರ ಪ್ರಸ್ತುತ ವರ್ಷದ ಮುಂಬಯಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next