ಭುವನೇಶ್ವರ: ಮುಂಬಯಿ ಮತ್ತು ಒಡಿಶಾ ನಡುವಣ ರಣಜಿ ಟ್ರೋಫಿಯ “ಸಿ’ ಬಣದ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ಗೆಲ್ಲಲು 413 ರನ್ ಗಳಿಸುವ ಗುರಿ ಪಡೆದ ಒಡಿಶಾ ತಂಡ 3ನೇ ದಿನದಾಟದ ಅಂತ್ಯಕ್ಕೆ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 93 ರನ್ನಿಗೆ 4 ವಿಕೆಟ್ ಕಳೆದು ಕೊಂಡು ಒದ್ದಾಡುತ್ತಿದೆ.
ಸೋಲು ತಪ್ಪಿ ಸಲು ಒಡಿಶಾ ಇನ್ನಳಿದ 6 ವಿಕೆಟ್ ನೆರವಿ ನಿಂದ ಅಂತಿಮ ದಿನ ಪೂರ್ತಿ ಆಡ ಬೇಕಾ ಗಿದ್ದರೆ ಮುಂಬಯಿ ಗೆಲ್ಲಲು ಆರು ವಿಕೆಟ್ ಉರುಳಿಸಬೇಕಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದ ಮುಂಬಯಿ ಮೊದಲ ಗೆಲುವಿನ ನಿರೀಕ್ಷೆ ಯಲ್ಲಿದ್ದು ಹೆಚ್ಚಿನ ಅವಕಾಶ ಹೊಂದಿದೆ. ಅಂತಿಮ ದಿನದಾಟದಲ್ಲಿ ಒಡಿಶಾ ಗೆಲ್ಲಲು ಇನ್ನೂ 320 ರನ್ ಗಳಿಸಬೇಕಾ ಗಿದೆ. ಒಡಿಶಾದ ಇನ್ನುಳಿದ ಆರು ವಿಕೆಟನ್ನು ಕಿತ್ತರೆ ಮುಂಬಯಿ ಗೆಲ್ಲಲಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದ ಮುಂಬಯಿ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಿದ್ದೇಶ್ ಲಾಡ್ ಅವರ ಆಕರ್ಷಕ ಶತಕದಿಂದಾಗಿ 9 ವಿಕೆಟಿಗೆ 268 ರನ್ ಪೇರಿಸಿ ಡಿಕ್ಲೇರ್ ಮಾಡಿ ಕೊಂಡಿತು. ಇದರಿಂದಾಗಿ ಒಡಿಶಾ ಗೆಲುವು ದಾಖಲಿಸಲು 413 ರನ್ ಗಳಿಸುವ ಕಠಿನ ಗುರಿ ಪಡೆಯಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಡಿಶಾ ಮೊದಲ ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ ನಟರಾಜ್ ಬೆಹೆರ ಮತ್ತು ಗೋವಿಂದ್ ಪೊದ್ದಾರ್ ದ್ವಿತೀಯ ವಿಕೆಟಿಗೆ 47 ರನ್ ಪೇರಿಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಈ ಜೋಡಿಯನ್ನು ಧವಳ್ ಕುಲಕರ್ಣಿ ಮುರಿದು ಮುಂಬಯಿ ಮೇಲುಗೈ ಸಾಧಿಸಲು ನೆರವಾದರು. 86 ರನ್ ತಲುಪಿದ ವೇಳೆ ಆಕಾಶ್ ಪಾರ್ಕರ್ ಸತತ ಎರಡು ಎಸೆತಗಳಲ್ಲಿ ಸೇನಾಪತಿ ಮತ್ತು ದೀಪಕ್ ಬೆಹರ ಅವರ ವಿಕೆಟನ್ನು ಹಾರಿಸಿದಾಗ ಒಡಿಶಾ ಒತ್ತಡಕ್ಕೆ ಒಳಗಾಯಿತು. ಸಂತನು ಮಿಶ್ರಾ (4) ಮತ್ತು ಗೋವಿಂದ ಪೊದ್ದಾರ್ 48 ರನ್ನುಗಳಿಂದ ಆಡುತ್ತಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಮುಂಬಯಿ 289 ಮತ್ತು 9 ವಿಕೆಟಿಗೆ 268 ಡಿಕ್ಲೇರ್x (ಪೃಥ್ವಿ ಶಾ 46, ಸಿದ್ದೇಶ್ ಲಾಡ್ 117, ಆಕಾಶ್ ಪಾರ್ಕರ್ 21, ಶಾದೂìಲ್ ಠಾಕುರ್ 32 ಔಟಾಗದೆ, ಸೂರ್ಯಕಾಂತ್ ಪ್ರಧಾನ್ 106ಕ್ಕೆ 3, ಮೊಹಾಂತಿ 72ಕ್ಕೆ 2, ಸಮಂತ್ರಾಯ್ 18ಕ್ಕೆ 2); ಒಡಿಶಾ 145 ಮತ್ತು 4 ವಿಕೆಟಿಗೆ 93 (ನಟರಾಜ್ ಬೆಹೆರ 21, ದೀಪಕ್ ಪೊದ್ದಾರ್ 48 ಬ್ಯಾಟಿಂಗ್, ಆಕಾಶ್ ಪಾರ್ಕರ್ 9ಕ್ಕೆ 2).