Advertisement

ಒಡಿಶಾ ಸಂಪ್ರದಾಯದ ಅನಾವರಣ

02:48 PM Apr 02, 2018 | Team Udayavani |

ಮಹಾನಗರ: ಮಂಗಳೂರು ಒಡಿಯ ಕಲ್ಚರಲ್‌ ಅಸೋಸಿಯೇಶನ್‌ ವತಿಯಿಂದ ರವಿವಾರ ನಗರದ ಮಂಗಳಾ ಕ್ರೀಡಾಂಗಣ ಬಳಿಯ ರೋಟರಿ ಬಾಲಭವನದಲ್ಲಿ ಉತ್ಕಲ್‌ ದಿನವನ್ನು ಆಚರಿಸಲಾಯಿತು. ಮಣಿಪಾಲ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ರಮೇಶ್‌ಚಂದ್ರ ಸಾಹೂ ಮಾತನಾಡಿ, ಇದೀಗ ಎರಡನೇ ವರ್ಷ ಮಂಗಳೂರಿನಲ್ಲಿ ಉತ್ಕಲ್‌ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ಒಡಿಶಾದ ಹಲವಾರು ಮಂದಿ ಭಾಗವಹಿಸುತ್ತಿದ್ದು, ಅವರವರ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.

Advertisement

ಮಂಗಳೂರಿನಲ್ಲಿ ಸುಮಾರು 120 ಒಡಿಶಾ ಕುಟುಂಬಗಳಿದ್ದು, 500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ನಗರದ ಆಸ್ಪತ್ರೆಗಳು, ಬ್ಯಾಂಕ್‌, ಎನ್‌ಎಂಪಿಟಿ, ಎಂಆರ್‌ಪಿಎಲ್‌, ರೈಲ್ವೇ ಇಲಾಖೆ, ಮೆಡಿಕಲ್‌ ಕಾಲೇಜು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಾನಾ ಸಂಸ್ಥೆಗಳಲ್ಲಿ ಒಡಿಶಾ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಒಡಿಶಾ ಮಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್‌ಇಝಡ್‌ ಚೀಫ್‌ ಪೈನಾನ್ಶಿಯಲ್‌ ಆಫೀಸರ್‌ ಗೌರಂಗ್‌ ಸ್ವೆ„ನ್‌, ಕಾರ್ಪೊರೇಷನ್‌ ಬ್ಯಾಂಕ್‌ ಕಾರ್ಪೊರೇಟ್‌ ಆಫೀಸ್‌ನ ಡಿಜಿಎಂ ಶಾಂತನು ದಾಸ್‌, ಕೆಎಂಸಿಯ ಡಾ| ಕೌಸಲ್ಯಾ ಸಾಹೋ, ಏರ್‌ಇಂಡಿಯಾ ಮಂಗಳೂರಿನ ಸರ್ವಿಸ್‌ ಎಂಜಿನಿಯರ್‌ ಸರ್ಬೆಶ್ವರ್‌ ಸಾಹೂ ಮೊದಲಾದವರು ಉಪಸ್ಥಿತರಿದ್ದರು.

ಕಲೆಗೆ ಪ್ರೋತ್ಸಾಹ 
ದ ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಫಿಸಿಯೋತೆರಪಿಸ್ಟ್‌ ಅಧ್ಯಕ್ಷ ಡಾ| ಉಮಾಶಂಕರ್‌ ಮೊಹಾಂತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಡಿಶಾ ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next