ಭುವನೇಶ್ವರ: ಒಡಿಶಾ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಶನಿವಾರ ಹೊರ ಬಿದ್ದಿದ್ದು, ಆಡಳಿತ ಪಕ್ಷ ಬಿಜು ಜನತಾ ದಳ ತನ್ನ ಅಸ್ತಿತ್ವ ತೋರಿದೆ.
108 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಿಜೆಡಿ 95 ರಲ್ಲಿ ಪ್ರಚಂಡ ಗೆಲುವು ಸಾಧಿಸಿದೆ, ಬಿಜೆಪಿ ಕೇವಲ 6, ಕಾಂಗ್ರೆಸ್ 4, ಸ್ವತಂತ್ರರು 3 ಸ್ಥಾನಗಳನ್ನು ಪಡೆಡಿದ್ದಾರೆ.
ಬಿಜು ಜನತಾ ದಳ 1,731 ಕೌನ್ಸಿಲರ್ ಸ್ಥಾನಗಳಲ್ಲಿ 1,183 ಸ್ಥಾನಗಳನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ 286 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ 139 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು, ಇತರರು 116 ಸ್ಥಾನಗಳನ್ನು ಪಡೆಡಿದ್ದಾರೆ.
ಭಾರಿ ಗೆಲುವಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಪಂಚಾಯತ್ ಮತ್ತು ನಗರ ಚುನಾವಣೆಗಳಲ್ಲಿ ನಮಗೆ ಈ ಪ್ರಚಂಡ ವಿಜಯವನ್ನು ನೀಡಿದ್ದಕ್ಕಾಗಿ ನಮ್ಮ ರಾಜ್ಯದ ಜನರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ಜನರ ಕಲ್ಯಾಣಕ್ಕಾಗಿ ನಾವು ನಮ್ಮ ಒಳ್ಳೆಯ ಕೆಲಸವನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
ರಾಜ್ಯ ಸರ್ಕಾರವು ಭುವನೇಶ್ವರ್ ಮತ್ತು ಬೆರ್ಹಾಂಪುರ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಮೇಯರ್ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಟ್ಟಿತ್ತು. ಚುನಾವಣೆಯಲ್ಲಿ ಒಡಿಶಾದಾದ್ಯಂತ ಎಲ್ಲಾ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಬಿಜೆಡಿ ಮೇಯರ್ ಸ್ಥಾನಗಳನ್ನು ಗೆದ್ದಿದೆ.ಸುಲೋಚನಾ ದಾಸ್ ಪ್ರತಿಷ್ಠಿತ ಭುವನೇಶ್ವರ ಕ್ಷೇತ್ರವನ್ನು ಗೆದ್ದರೆ, ಸುಭಾಷ್ ಸಿಂಗ್ ಮತ್ತು ಸಂಘಮಿತ್ರ ದಲೇ ಕಟಕ್ ಮತ್ತು ಬೆರ್ಹಾಂಪುರ ಸ್ಥಾನಗಳನ್ನು ಗೆದ್ದಿದ್ದಾರೆ.