ನವದೆಹಲಿ : ವೈದಕೀಯ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷಾ (NEET) ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಈ ಬಾರಿ ಓಡಿಶ್ಸಾದ 18 ವರ್ಷದ ಶೋಯೆಬ್ ಆಫ್ತಬ್ 720 ಅಂಕಕ್ಕೆ ಪೂರ್ತಿ 720 ಅಂಕಗಳಿಸುವುದರ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ.
ಒಡಿಶಾದ ರೂರ್ಕೆಲಾ ಪ್ರದೇಶದ ಶೋಯೆಬ್ ಭವಿಷ್ಯದಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗುವ ಕನಸು ಇಟ್ಟುಕೊಂಡಿದ್ದಾರೆ.ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆ ಪರಿಣಾಮ ಇಂದು ಶೋಯೆಬ್ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಲಾಕ್ ಡೌನ್ ಅವಧಿಯನ್ನು ಸರಿಯಾಗಿ ಬಳಿಸಿಕೊಂಡು, ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಹೇಳುವ ಶೋಯೆಬ್ 2018 ರಿಂದ ತಾನು ತನ್ನ ಊರಿಗೆ ಹೋಗದೆ ಕೋಟಾದಲ್ಲೇ ಅಮ್ಮ ಹಾಗೂ ತಂಗಿಯೊಂದಿಗೆ ಇದ್ದೆ, ಲಾಕ್ ಡೌನ್ ವೇಳೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಕೋಟಾದಿಂದ ತಮ್ಮ ತಮ್ಮ ಊರಿಗೆ ತಲುಪಿದರು. ನಾನು ಊರಿಗೆ ತೆರಳದೆ ಪರೀಕ್ಷೆಗಾಗಿ ಕೋಚಿಂಗ್ ಸೆಂಟರ್ ನಲ್ಲಿ ಅಭ್ಯಾಸ ನಡೆಸಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಲೇಜು ಮುಗಿದ ಬಳಿಕ ನೇರವಾಗಿ ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದೆ. ಆದಾದ ಬಳಿಕ ಪ್ರತಿನಿತ್ಯ 2-3 ಗಂಟೆಗಳ ಕಾಲ ಸ್ವಯಂ ಅಭ್ಯಾಸ ನಡೆಸುತ್ತಿದ್ದೆ.ನಿರಂತರ ಪರಿಶ್ರಮ ಹಾಗೂ ಮನೆಯವರ ಸಹಕಾರ ಸಾಧನೆಗೆ ಪುಷ್ಟಿ ನೀಡಿದೆ ಎಂದು ಶೋಯೆಬ್ ಹೇಳಿದ್ದಾರೆ.
ಶೋಯೆಬ್ ಅವರ ಕುಟುಂಬ ಮಧ್ಯಮ ವರ್ಗಕ್ಕೆ ಸೇರಿದಾಗಿದ್ದು, ಶೋಯೆಬ್ ತಂದೆ ಒಬ್ಬ ಕಟ್ಟಡ ನಿರ್ಮಾಣ ವ್ಯವಹಾರ ಮಾಡುವವರಾಗಿದ್ದು ಮಗನ ಸಾಧನೆಯಿಂದ ಖುಷಿಯಾಗಿರುವ ಪೋಷಕರು ಸದ್ಯ ಅಜ್ಮೇರ್ ಷರೀಫ್ ದರ್ಗಾಕ್ಕೆ ಹೋಗಿ ದೇವರಿಗೆ ಧನ್ಯವಾದ ಸಲ್ಲಿಸಲಿದ್ದಾರೆ.
ಕಠಿಣ ಪರೀಕ್ಷೆ ಎಂದು ಭಾವಿಸಲಾಗುವ ನೀಟ್ ಪರೀಕ್ಷೆಯಲ್ಲಿ ಈ ವರ್ಷ 14.37 ಲಕ್ಷ ವಿದ್ಯಾರ್ಥಿಗಳು ನೋಂದಾಣಿ ಮಾಡಿಕೊಂಡದ್ದರು ಶೇ.50 ಅಂಕಗಳಿಸಲು ತೀರಾ ಕಷ್ಟಪಡುವ ನೀಟ್ ಪರೀಕ್ಷೆಯಲ್ಲಿ ಶೇ.100 ಅಂಕ ಗಳಿಸಿರುವ ಶೋಯೆಬ್ ಇತಿಹಾಸ ನಿರ್ಮಿಸಿದ್ದಾನೆ.