Advertisement

ದೇಗುಲಕ್ಕೆ ಭಿಕ್ಷುಕಿಯ 1 ಲಕ್ಷ ರೂ. ದೇಣಿಗೆ

07:47 PM Dec 17, 2022 | Team Udayavani |

ಭಿಕ್ಷೆ ಬೇಡುವವರ ಹತ್ತಿರ ಏನು ಇರುತ್ತದೆ ಎಂಬ ಉದಾಸೀನತೆಯ ಭಾವ ಎಲ್ಲರಲ್ಲೂ ಇರುತ್ತದೆ. ಅವರೇ ಕೆಲವೊಮ್ಮೆ ಹುಬ್ಬೇರಿಸುವಂತೆ ನೆರವನ್ನೂ ನೀಡುತ್ತಾರೆ.

Advertisement

ಒಡಿಶಾದ ಕಂಧಮಾಲ್‌ ಜಿಲ್ಲೆಯ ಫುಲ್ ಬನಿ ಎಂಬಲ್ಲಿ ಇರುವ ಜಗನ್ನಾಥ ದೇಗುಲದ ಮುಂದೆ ಜೀವನದ ಉದ್ದಕ್ಕೂ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿದ್ದ 70 ವರ್ಷದ ತುಲಾ ಬೆಹಾರ ಮಹಿಳೆಯೇ ಸುದ್ದಿಗೆ ಕಾರಣರಾಗಿದ್ದಾರೆ. ಅವರು ತಮ್ಮ ಪತಿ ಪ್ರಫ‌ುಲ್ಲಾ ಬೆಹಾರ ಜತೆಗೆ 40 ವರ್ಷಗಳಿಂದ ಭಿಕ್ಷಾಟನೆಯಿಂದಲೇ ಜೀವನ ಸಾಗಿಸುತ್ತಿದ್ದರು.

ಶುಕ್ರವಾರ ಧನು ಸಂಕ್ರಮಣ ನಿಮಿತ್ತ ಜಗನ್ನಾಥ ದೇಗುಲದ ಆಡಳಿತ ಮಂಡಳಿಯವರನ್ನು ಕಂಡು 1 ಲಕ್ಷ ರೂ. ದೇಣಿಗೆ ನೀಡಿದ್ದರು. ಅದನ್ನು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಸರದಿ ಅವರದ್ದು. ಪತಿ ನಿಧನ ಹೊಂದಿದ ಬಳಿಕ ಹಣ ಕೂಡಿಡುತ್ತಾ ಬಂದಿದ್ದರು. ಆ ಹಣದಿಂದ ಹಳೆಯ ದೇಗುಲವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ತುಲಾ ಮನವಿ ಮಾಡಿದ್ದಾರೆ. ಜಾಲತಾಣಗಳಲ್ಲಿ ಅವರ ಕಥೆ ವೈರಲ್‌ ಆಗಿದೆ ಮತ್ತು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next