Advertisement

ODI Series: ಲಂಕಾಗೆ ಬಂದಿಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ; ಅಭ್ಯಾಸ ಆರಂಭ

05:50 PM Jul 29, 2024 | Team Udayavani |

ಕೊಲಂಬೊ: ಶ್ರೀಲಂಕಾ ವಿರುದ್ದದ ಏಕದಿನ ಸರಣಿಗಾಗಿ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma), ಹಿರಿಯ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಏಕದಿನ ಸರಣಿಗಾಗಿ ಮಾತ್ರ ಆಯ್ಕೆಯಾದ ಆಟಗಾರರು ದ್ವೀಪ ರಾಷ್ಟ್ರಕ್ಕೆ ಬಂದಿಳಿದರು.

Advertisement

ಭಾರತೀಯ ನಾಯಕನ ಹೊರತಾಗಿ, ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳಿಗೆ ಪ್ರತ್ಯೇಕವಾಗಿ ಆಯ್ಕೆಯಾದ ಆಟಗಾರರು ಭಾನುವಾರ ರಾತ್ರಿ ಶ್ರೀಲಂಕಾ ರಾಜಧಾನಿಯಲ್ಲಿರುವ ಐಟಿಸಿ ರತ್ನದೀಪ ಹೋಟೆಲ್‌ ತೆರಳಿದರು. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಕೊಲಂಬೊಗೆ ಬಂದಿಳಿದರು.

ಏಕದಿನ ಆಟಗಾರರು ಸೋಮವಾರ ಕ್ರೀಡಾಂಗಣದಲ್ಲಿ ನೆಟ್ ಸೆಷನ್‌ನಲ್ಲಿ ಭಾಗವಹಿಸಿವೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಹಾಯಕ ಕೋಚ್‌ ಅಭಿಷೇಕ್ ನಾಯರ್ ಅವರನ್ನು ಕೊಲಂಬೊದಲ್ಲಿ ನಡೆಯುವ ಅಭ್ಯಾಸದ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ. ಭಾನುವಾರ ರಾತ್ರಿ ನಡೆದ ಎರಡನೇ ಟಿ20 ಪಂದ್ಯದ ಬಳಿಕ ನಾಯರ್ ಸೋಮವಾರ ಬೆಳಗ್ಗೆ ಕೊಲಂಬೊಗೆ ತೆರಳಿದ್ದರು.

ಸದ್ಯ ಟಿ20 ಸರಣಿ ಆಡುತ್ತಿರುವ ಏಕದಿನ ಸರಣಿಯಲ್ಲಿರುವ ಉಳಿದ ಆಟಗಾರರು ಮೂರನೇ ಟಿ20 ಪಂದ್ಯದ ಬಳಿಕ ಕೊಲೊಂಬೊಗೆ ತೆರಳಲಿದ್ದಾರೆ. ಜುಲೈ 30ರಂದು ಮೂರನೇ ಟಿ20 ಪಂದ್ಯ ಪಲ್ಲೆಕೆಲೆಯಲ್ಲಿ ನಡೆಯಲಿದೆ.

Advertisement

ಆಗಸ್ಟ್ 2ರಿಂದ ಏಕದಿನ ಸರಣಿ ಕೊಲಂಬೊದಲ್ಲಿ ಆರಂಭವಾಗಲಿದೆ. ಸರಣಿಯ ಮೂರೂ ಪಂದ್ಯಗಳು ಅಲ್ಲೇ ನಡೆಯಲಿದೆ. ಎರಡನೇ ಪಂದ್ಯ ಆಗಸ್ಟ್ 4ರಿಂದ ಮೂರನೇ ಪಂದ್ಯ ಆಗಸ್ಟ್ 7ರಂದು ನಡೆಯಲಿದೆ.

ಏಕದಿನ ತಂಡ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್ (ಉ.ನಾ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್ , ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Advertisement

Udayavani is now on Telegram. Click here to join our channel and stay updated with the latest news.

Next