ದುಬಾೖ: ಕಳೆದ ಮಂಗಳವಾರ ಅಂತ್ಯಗೊಂಡ ಆಸ್ಟ್ರೇಲಿಯ ವಿರುದ್ಧದ ಸರಣಿಯನ್ನು 0-3 ಅಂತರದಿಂದ ಕಳೆದುಕೊಂಡ ಇಂಗ್ಲೆಂಡ್ ತಂಡವು ಇದೀಗ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ.
ಕಳೆದ ಸೆಪ್ಟಂಬರ್‌ನಲ್ಲಿ ಅಗ್ರಸ್ಥಾನವನ್ನು ಇಂಗ್ಲೆಂಡಿಗೆ ಬಿಟ್ಟುಕೊಟ್ಟಿದ್ದ ನ್ಯೂಜಿಲ್ಯಾಂಡ್ ಮತ್ತೆ ಅಗ್ರಸ್ಥಾನಕ್ಕೇರಿದೆ.
ಹಾಲಿ ಏಕದಿನ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಆಸ್ಟ್ರೇಲಿಯ ವಿರುದ್ಧದ ಸರಣಿ ಮೊದಲು 119 ಅಂಕ ಹೊಂದಿತ್ತು. ಇದೀಗ ಸರಣಿ ಸೋತಿರುವ ಇಂಗ್ಲೆಂಡ್ ಆರಂಕ ಕಳೆದುಕೊಂಡಿದೆ.
ಆಸ್ಟ್ರೇಲಿಯ ಮತ್ತು ಭಾರತ ತಲಾ 112 ಅಂಕ ಹೊಂದಿದೆ. ಆದರೆ ಸಮಗ್ರ ಅಂಕಗಳ ಆಧಾರ ದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯ ನಾಲ್ಕನೇ ಸ್ಥಾನ ಪಡೆದಿದೆ.
Related Articles
ಕಳೆದ ಎರಡು ವರ್ಷಗಳಿಂದ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ನಂಬರ್ ವನ್ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆಯಿತ್ತು. 2021ರ ಮೇ ತಿಂಗಳಲ್ಲಿ ಅಗ್ರಸ್ಥಾನಕ್ಕೇರಿದ್ದ ನ್ಯೂಜಿಲ್ಯಾಂಡ್ 2022ರ ಸೆಪ್ಟಂಬರ್ ತನಕ ನಂಬರ್ ವನ್ ಸ್ಥಾನವನ್ನು ಅಲಂಕರಿಸಿತ್ತು.