Advertisement

ವನಿತಾ ಕ್ರಿಕೆಟ್ ನಲ್ಲಿ ದಾಖಲೆ ಬರೆದ ಇಂಗ್ಲೆಂಡ್ ನ ಚಾರ್ಲಿ ಡೀನ್

04:12 PM Apr 01, 2024 | Team Udayavani |

ಲಂಡನ್: ಇಂಗ್ಲೆಂಡ್ ನ ವನಿತಾ ಕ್ರಿಕೆಟ್ ತಂಡದ ಚಾರ್ಲಿ ಡೀನ್ ಅವರು ಹೊಸ ದಾಖಲೆ ಬರೆದಿದ್ದಾರೆ. ವನಿತಾ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ವೇಗವಾಗಿ 50 ಏಕದಿನ ವಿಕೆಟ್ ಕಿತ್ತ ದಾಖಲೆಯನ್ನು ಚಾರ್ಲಿ ಡೀನ್ ಬರೆದಿದ್ದಾರೆ.

Advertisement

ಅವರು 26ನೇ ಇನ್ನಿಂಗ್ಸ್ ನಲ್ಲಿ ಚಾರ್ಲಿ ಡೀನ್ ಅವರು 50 ವಿಕೆಟ್ ಪಡೆದ ಸಾಧನೆ ಮಾಡಿದರು. ಅವರು ಈ ಹಿಂದೆ 27 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದ ಆಸ್ಟ್ರೇಲಿಯಾದ ಎಡಗೈ ವೇಗಿ ಲಿಯಾನ್ ಫುಲ್ ಸ್ಟೋನ್ ಅವರ ದಾಖಲೆ ಮುರಿದರು.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಡೀನ್ ಈ ಸಾಧನೆ ಮಾಡಿದರು. ವೆಲ್ಲಿಂಗ್ಟನ್ ನ ಬೇಸನ್ ರಿಸರ್ವ್ ನಲ್ಲಿ ನಡೆದ ಪಂದ್ಯದಲ್ಲಿ ಬ್ರೂಕಿ ಹಾಲಿಡೇ ಅವರ ವಿಕೆಟ್ ನೊಂದಿಗೆ ಚಾರ್ಲಿ ಡೀನ್ 50ನೇ ವಿಕೆಟ್ ಪಡೆದರು. ಸೂಜಿ ಬೇಟ್ಸ್ ಮತ್ತು ಲೀ ತಹುಹು ವಿಕೆಟ್ ಕಿತ್ತ ಡೀನ್, 9 ಓವರ್ ಗಳಲ್ಲಿ 57 ರನ್ ನೀಡಿ ಮೂರು ವಿಕೆಟ್ ಪಡೆದರು.

ಬ್ಯಾಟಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ 23ರ ಹರೆಯದ ಡೀನ್, 70 ಎಸೆತಗಳಲ್ಲಿ 42 ರನ್ ಗಳಿಸಿದರು. ತಂಡಕ್ಕೆ ನಾಲ್ಕು ವಿಕೆಟ್ ಅಂತರದ ಗೆಲುವು ತಂದುಕೊಡುವಲ್ಲಿ ಸಹಾಯ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next