ದುಬೈ: ವಿಶ್ವಕಪ್ ಬಳಿಕ ಐಸಿಸಿ ನವೆಂಬರ್ 22 ರಂದು ಏಕದಿನ ರ‍್ಯಾಂಕಿಂಗ್ ಪ್ರಕಟಿಸಿದ್ದು ಭಾರತ ತಂಡ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಶುಭಮನ್ ಗಿಲ್ ಮೊದಲ ಸ್ಥಾನದಲ್ಲಿದ್ದು, ಕೊಹ್ಲಿ ಮೂರು ಮತ್ತು ರೋಹಿತ್ ಶರ್ಮ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ನಂತರ ಗಿಲ್ (826 ರೇಟಿಂಗ್ ಪಾಯಿಂಟ್‌ಗಳು) ಹೊಂದಿದ್ದಾರೆ ಆ ಬಳಿಕ ಪಾಕಿಸ್ಥಾನ ನಾಯಕ ಬಾಬರ್ ಅಜಮ್ (824) ಕೊಹ್ಲಿ (791) ಮತ್ತು ರೋಹಿತ್ ಶರ್ಮ ಒಂದು ಸ್ಥಾನ ಮೇಲೇರಿದ್ದಾರೆ (769) ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.
ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರು ಎರಡು ಸ್ಥಾನಗಳನ್ನು ಕಳೆದುಕೊಂಡು ಐದನೇ ಸ್ಥಾನಕ್ಕೆ ಇಳಿದಿದ್ದಾರೆ, ನ್ಯೂಜಿ ಲ್ಯಾಂಡ್ ಬಲಗೈ ಆಟಗಾರ ಡ್ಯಾರಿಲ್ ಮಿಚೆಲ್ ವಿಶ್ವಕಪ್‌ನಲ್ಲಿ 552 ರನ್‌ಗಳಿಸಿದ ಹಿನ್ನಲೆಯಲ್ಲಿ ಸ್ಥಾನಕ್ಕೆ ಏರಿದ್ದಾರೆ.
ತಂಡಗಳ ರ‍್ಯಾಂಕಿಂಗ್ ನಲ್ಲಿ ಭಾರತದ ಬಳಿಕ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ , 9ನೇ ಸ್ಥಾನದಲ್ಲಿ ಅಫ್ಘಾನಿಸ್ಥಾನ ಮತ್ತು 10ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಇದೆ.
ಬೌಲಿಂಗ್ ನಲ್ಲಿ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಮೊದಲ ಸ್ಥಾನದಲ್ಲಿದ್ದಾರೆ. 2 ನೇ ಸ್ಥಾನದಲ್ಲಿ ಜೋಶ್ ಹ್ಯಾಜಲ್ವುಡ್ ಇದ್ದರೆ ಮೂರನೇ ಸ್ಥಾನದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರಿದ್ದಾರೆ. 4 ನೇ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ , 6 ನೇ ಸ್ಥಾನದಲ್ಲಿ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಅವರೊಂದಿಗೆ ಕುಲದೀಪ್ ಯಾದವ್ ಅವರಿದ್ದಾರೆ. (ಇಬ್ಬರದ್ದೂ 667 ಪಾಯಿಂಟ್‌ಗಳು) ವಿಶ್ವಕಪ್ ನಲ್ಲಿ ಗರಿಷ್ಠ ವಿಕೆಟ್ ಬಾಚಿಕೊಂಡ ಮೊಹಮ್ಮದ್ ಶಮಿ (648) ಅವರು 10 ನೇ ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜಾ 10 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರಿದ್ದಾರೆ.