ಓವಲ್: ಬೆನ್ ಸ್ಟೋಕ್ಸ್ ಅವರ ದಾಖಲೆಯ ಬ್ಯಾಟಿಂಗ್‌ನಿಂದಾಗಿ ಆತಿಥೇಯ ಇಂಗ್ಲೆಂಡ್ ತಂಡವು ಓವಲ್‌ನಲ್ಲಿ ನಡೆದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 181 ರನ್ನುಗಳ ದೊಡ್ಡ ಗೆಲುವು ದಾಖಲಿಸಿದೆ.
ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಬೆನ್ ಸ್ಟೋಕ್ಸ್ ಅವರ 182 ರನ್ ನೆರವಿನಿಂದ ಇಂಗ್ಲೆಂಡ್ ತಂಡವು 48.1 ಓವರ್‌ಗಳಲ್ಲಿ 368 ರನ್ನಿಗೆ ಆಲೌಟಾಯಿತು. ಸ್ಟೋಕ್ಸ್ ಅವರ ನಿರ್ವಹಣೆ ಇಂಗ್ಲೆಂಡ್ ಕ್ರಿಕೆಟಿಗನೋರ್ವನ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ನ್ಯೂಜಿಲ್ಯಾಂಡ್ ತಂಡವು 39 ಓವರ್‌ಗಳಲ್ಲಿ ಕೇವಲ 187 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಗ್ಲೆನ್ ಫಿಲಿಪ್ಸ್ ಮಾತ್ರ ಆತಿಥೇಯರ ದಾಳಿಯನ್ನು ಸಮರ್ಥವಾಗಿ ಎದುರಿಸಿ 72 ರನ್ ಹೊಡೆದರು. ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಕ್ರಿಸ್ ವೋಕ್ಸ್ ಮತ್ತು ಲಿಯಮ್ ಲಿವಿಂಗ್‌ಸ್ಟೋನ್ ತಲಾ ಮೂರು ವಿಕೆಟ್ ಹಾರಿಸಿದರು.
ಈ ಗೆಲುವಿನಿಂದ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಸರಣಿಯ ನಾಲ್ಕನೇ ಪಂದ್ಯ ಶುಕ್ರವಾರ ಲಾರ್ಡ್ಸ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 48.1 ಓವರ್‌ಗಳಲ್ಲಿ 368 (ಬೆನ್ ಸ್ಟೋಕ್ಸ್ 182, ಡೇವಿಡ್ ಮಲಾನ್ 96, ಟ್ರೆಂಟ್ ಬೋಲ್ಟ್ 51ಕ್ಕೆ 5, ಬೆನ್ ಲಿಸ್ಟರ್ 69ಕ್ಕೆ 3); ನ್ಯೂಜಿಲ್ಯಾಂಡ್ 39 ಓವರ್‌ಗಳಲ್ಲಿ 187 (ಗ್ಲೆನ್ ಫಿಲಿಪ್ಸ್ 72, ರಚಿನ್ ರವೀಂದ್ರ 28, ವೋಕ್ಸ್ 31ಕ್ಕೆ 3, ಲಿವಿಂಗ್‌ಸ್ಟೋನ್ 16ಕ್ಕೆ 3).