Advertisement

ODI Cricket; ಸಚಿನ್‌ ದಾಖಲೆ ಮುರಿದ ವಾರ್ನರ್‌

11:56 PM Sep 09, 2023 | Team Udayavani |

ಬ್ಲೋಮ್‌ಫಾಂಟೀನ್‌: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌ ಆರಂಭಿಕನಾಗಿ 46ನೇ ಅಂತಾರಾಷ್ಟ್ರೀಯ ಶತಕ ಬಾರಿಸಿ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಮುರಿದರು.

Advertisement

ವಾರ್ನರ್‌ 106 ರನ್‌ ಮಾಡಿದರು. ಇದು ಏಕದಿನದಲ್ಲಿ ಅವರ 20ನೇ ಶತಕ. ಟೆಸ್ಟ್‌ ನಲ್ಲಿ 25 ಹಾಗೂ ಟಿ20ಯಲ್ಲಿ ಒಂದು ಶತಕ ಹೊಡೆದಿದ್ದಾರೆ. ತೆಂಡುಲ್ಕರ್‌ ಆರಂಭಿಕನಾಗಿ 45 ಶತಕ ಹೊಡೆದಿದ್ದರು. ಇವೆಲ್ಲವೂ ಏಕದಿನದಲ್ಲೇ ದಾಖಲಾಗಿದ್ದವು.

ವಾರ್ನರ್‌ ಜತೆಗೆ ಮಾರ್ನಸ್‌ ಲಬುಶೇನ್‌ 124 ರನ್‌ ಹೊಡೆದರು. ಟ್ರ್ಯಾವಿಸ್‌ ಹೆಡ್‌ 64, ಜೋಶ್‌ ಇಂಗ್ಲಿಸ್‌ 50 ರನ್‌ ಕೊಡುಗೆ ಸಲ್ಲಿಸಿದರು. ಇವರ ಬ್ಯಾಟಿಂಗ್‌ ಸಾಹಸದಿಂದ ಆಸ್ಟ್ರೇಲಿಯ 8 ವಿಕೆಟಿಗೆ 392 ರನ್‌ ಪೇರಿಸಿ ದಕ್ಷಿಣ ಆಫ್ರಿಕಾಕ್ಕೆ ಸವಾಲೊಡ್ಡಿದೆ.

ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 41.5 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯ 123 ರನ್‌ಗಳ ಭರ್ಜರಿ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next