Advertisement

ODI: ವೆಸ್ಟ್‌ ಇಂಡೀಸ್‌ ಎದುರು ಆಸೀಸ್‌ಗೆ 8 ವಿಕೆಟ್‌ ಜಯ

11:33 PM Feb 02, 2024 | Team Udayavani |

ಮೆಲ್ಬರ್ನ್: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಆಸ್ಟ್ರೇಲಿಯ 8 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 48.4 ಓವರ್‌ಗಳಲ್ಲಿ 231 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಜವಾಬಿತ್ತ ಆಸೀಸ್‌ 38.3 ಓವರ್‌ಗಳಲ್ಲಿ ಕೇವಲ 2 ವಿಕೆಟಿಗೆ 232 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.
ಆರಂಭಿಕನಾಗಿ ಬಂದ ಕೀಪರ್‌ ಜೋಶ್‌ ಇಂಗ್ಲಿಸ್‌ 65 ರನ್‌ ಬಾರಿಸಿದರು. ಬಳಿಕ ಕ್ಯಾಮರಾನ್‌ ಗ್ರೀನ್‌ (ಔಟಾಗದೆ 77) ಮತ್ತು ನಾಯಕ ಸ್ಟೀವನ್‌ ಸ್ಮಿತ್‌ (ಔಟಾಗದೆ 79) ಮುರಿಯದ 3ನೇ ವಿಕೆಟಿಗೆ 149 ರನ್‌ ಪೇರಿಸಿ ಅಧಿಕಾರಯುತ ಗೆಲುವು ತಂದಿತ್ತರು. ಮತ್ತೋರ್ವ ಓಪನರ್‌ ಟ್ರ್ಯಾವಿಸ್‌ ಹೆಡ್‌ (4) ಮಾತ್ರ ಬೇಗನೇ ಪೆವಿಲಿಯನ್‌ ಸೇರಿಕೊಂಡರು.

ಬಾರ್ಟ್‌ಲೆಟ್‌ಗೆ 4 ವಿಕೆಟ್‌
ಆಸ್ಟ್ರೇಲಿಯದ ಬೌಲಿಂಗ್‌ ಸರದಿಯಲ್ಲಿ ಮಿಂಚಿದವರು ಏಕದಿನಕ್ಕೆ ಪದಾರ್ಪಣೆಗೈದ 19 ವರ್ಷದ ಬಲಗೈ ವೇಗಿ ಕ್ಸೇವಿಯರ್‌ ಬಾರ್ಟ್‌ ಲೆಟ್‌. 9 ಓವರ್‌ಗಳಲ್ಲಿ ಒಂದು ಮೇಡನ್‌ ಮಾಡಿದ ಬಾರ್ಟ್‌ಲೆಟ್‌, ಕೇವಲ 17 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ವಿಂಡೀಸ್‌ ಸರದಿಯಲ್ಲಿ ಮಿಂಚಿದ್ದು ಕಾರ್ಟಿ (88) ಮತ್ತು ರೋಸ್ಟನ್‌ಚೇಸ್‌ (59) ಮಾತ್ರ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-48.4 ಓವರ್‌ಗಳಲ್ಲಿ 231 (ಕೇಸಿ ಕಾರ್ಟಿ 88, ಚೇಸ್‌ 59, ವಾಲ್ಶ್ 20, ಬಾರ್ಟ್‌ಲೆಟ್‌ 17ಕ್ಕೆ 4, ಗ್ರೀನ್‌ 40ಕ್ಕೆ 2, ಅಬೋಟ್‌ 42ಕ್ಕೆ 2). ಆಸ್ಟ್ರೇಲಿಯ-38.3 ಓವರ್‌ಗಳಲ್ಲಿ 2 ವಿಕೆಟಿಗೆ 232 (ಸ್ಮಿತ್‌ ಔಟಾಗದೆ 79, ಗ್ರೀನ್‌ ಔಟಾಗದೆ 77, ಇಂಗ್ಲಿಸ್‌ 65).

Advertisement
Advertisement

Udayavani is now on Telegram. Click here to join our channel and stay updated with the latest news.

Next