ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಟ್ಟದ ಶಾಲಾ ಮಕ್ಕಳ 21ನೇ ವರ್ಷದ ಪರಿಸರ ಸ್ಪರ್ಧೆಯನ್ನು ಆ.5 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲು ಗುರುವಾಯನಕೆರೆಯಲ್ಲಿ ನಡೆಸಲಾಗುವುದು ಎಂದು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಕಚೇರಿಯಲ್ಲಿ ನಡೆದ ಪರಿಸರ ಸ್ಪರ್ಧಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲಾ ಮಟ್ಟದಲ್ಲಿ 4 ವಿಷಯಗಳಲ್ಲಿ (ಪರಿಸರ ಗೀತೆ, ಚಿತ್ರಕಲೆ, ಭಾಷಣ, ಗಿಡಮರ ಗುರುತಿಸುವಿಕೆ) ನಡೆಯುವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದು, ಈ ಬಗ್ಗೆ ತತ್‌ಕ್ಷಣ ಸುತ್ತೋಲೆ ಕಳಿಸಲು ವ್ಯವಸ್ಥೆ ಮಾಡಲಾಯಿತು. ಕಾರ್ಯಕ್ರಮದ ಸಮಗ್ರ ರೂಪುರೇಷೆಗಳನ್ನು ನಿರ್ಧರಿಸಲಾಯಿತು.
ಸಮಿತಿಯ ಸಭೆಯನ್ನು ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಸುಭಾಸ್ ಜಾಧವ ನಡೆಸಿಕೊಟ್ಟರು.
ಇಲಾಖಾ ವತಿಯಿಂದ ಸದಸ್ಯರಾಗಿರುವ ಪುಂಜಾಲಕಟ್ಟೆ ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಧರಣೇಂದ್ರ ಕೆ., ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯ ದೆ„ಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೆ., ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಸುಗುಣಾ ಬಾಯಿ ಎ., ಮುಗುಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸವಿತಾ ಕೆ., ಪೆರೋಡಿತ್ತಾಯಕಟ್ಟೆ ಸರಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯ ಸಹ ಶಿಕ್ಷಕ ದೇವದಾಸ್ ನಾಯಕ್ ಹಾಗೂ ಟ್ರಸ್ಟ್ ವತಿಯಿಂದ ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಹೆಚ್., ದಲಿತ ಅಭಿವೃದ್ಧಿ ಸಮಿತಿಯ ಸೋಮ ಕೆ. ದ. ಕ. ಪರಿಸರಾಸಕ್ತರ ಒಕ್ಕೂಟದ ಉಪಾಧ್ಯಕ್ಷ ಐ. ಕುಶಾಲಪ್ಪ ಗೌಡ, ಕೃಷಿಕರ ವೇದಿಕೆಯ ಕಾರ್ಯದರ್ಶಿ ಕೆ. ಸದಾಶಿವ ಹೆಗ್ಡೆ, ಟ್ರಸ್ಟ್‌ನ ಸಂಯೋಜಕ ಬಾಬು ಎ. ಭಾಗವಹಿಸಿದ್ದರು.ಧರಣೇಂದ್ರ ಕೆ. ವಂದಿಸಿದರು.