Advertisement

ಅ.10 -19: ಮಂಗಳೂರು ದಸರಾ,  ಕುದ್ರೋಳಿ: ಪೂರ್ವಭಾವಿ ಸಭೆ 

10:53 AM Sep 19, 2018 | Team Udayavani |

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮಂಗಳೂರು ದಸರಾ ಮಹೋತ್ಸವ’ ಅ. 10ರಿಂದ 19ರವರೆಗೆ ಜರ ಗಲಿದ್ದು, ಇದರ ಅಂಗವಾಗಿ ಪೂರ್ವಭಾವಿ ಸಭೆ ಶ್ರೀ ಗೋಕರ್ಣನಾಥ ಸಭಾಂಗಣದಲ್ಲಿ ನಡೆಯಿತು.

Advertisement

ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ ಅಧ್ಯಕ್ಷತೆ ವಹಿಸಿ, ಈ ಬಾರಿಯೂ ಮಂಗಳೂರು ದಸರಾವನ್ನು ವೈಭವದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಉತ್ಸವಕ್ಕೆ ಬೀದಿ ದೀಪಾಲಂಕಾರ ನಡೆಸುವ ಕಂಟ್ರ್ಯಾಕ್ಟ್ ದಾರರ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಈ ಬಾರಿ ವಿದ್ಯುದ್ದೀಪಾಲಂಕಾರವನ್ನು ಮತ್ತಷ್ಟು ವಿಭಿನ್ನ, ವೈಭವವಾಗಿ ರಚಿಸುವಂತೆ ಸೂಚನೆ ನೀಡಲಾಗಿದೆ. ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಇದನ್ನು ಪ್ರಕಟಿಸಲಾಗುವುದು ಎಂದರು.

ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಮಾತನಾಡಿ, 10ಕ್ಕೂ ಅಧಿಕ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲಿದೆ. ದಸರಾ ಮೆರವಣಿಗೆ ವೈಭವವನ್ನು ಹೆಚ್ಚಿಸುವ ಟ್ಯಾಬ್ಲೋ (ಸ್ತಬ್ಧಚಿತ್ರ)ಗಳು ಬಗ್ಗೆ ಚರ್ಚಿಸಲು ಟ್ಯಾಬ್ಲೋ ಮುಖ್ಯಸ್ಥರ ಸಭೆ ಕರೆಯಲಾಗುವುದು. ಈ ಸಂದರ್ಭ ಮೆರವಣಿಗೆಯನ್ನು ಸಾಂಗವಾಗಿ ನಡೆಸಲು ಕೆಲವೊಂದು ಸೂಚನೆ ನೀಡಲಾಗುವುದು ಎಂದರು.

ದಸರಾ ಸಂದರ್ಭ ಪೂಜಿಸಲ್ಪಡುವ ಮೂರ್ತಿಗಳ ಸಿದ್ಧತಾ ಕಾರ್ಯಗಳು ಸೆ. 13ರಿಂದ ಆರಂಭಗೊಂಡಿದೆ. ದಸರಾ ಮಹೋತ್ಸವ ನಡೆಯುವ ದರ್ಬಾರು ಮಂಟಪವನ್ನು ಈ ಬಾರಿಯೂ ವಿಭಿನ್ನವಾಗಿ ಅಲಂಕರಿಸಲಾಗುವುದು ಎಂದರು.

ಆಡಳಿತ ಸಮಿತಿ ಸದಸ್ಯ ಶೇಖರ್‌ ಪೂಜಾರಿ, ದೇವೇಂದ್ರ ಪೂಜಾರಿ, ಮಾಧವ ಸುವರ್ಣ, ರವಿಶಂಕರ್‌ ಮಿಜಾರು, ಡಿ.ಡಿ. ಕಟ್ಟೆಮಾರ್‌, ಡಾ| ಅನಸೂಯಾ, ಡಾ| ಬಿ.ಜಿ. ಸುವರ್ಣ, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಪದ್ಮನಾಭ ಕೋಟ್ಯಾನ್‌ ಪಡು, ಯುವವಾಹಿನಿ ಅಧ್ಯಕ್ಷ ಜಯಂತ್‌ ನಡುಬೈಲ್‌, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ದೀಪಕ್‌ ಪೂಜಾರಿ, ನೀಲಾಕ್ಷ ಕರ್ಕೇರ, ಚಿತ್ತರಂಜನ್‌ ಗರೋಡಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next