Advertisement

ಸಾಗರ ದಿನಾಚರಣೆ; ಕೊಳೆಯದ ವಸ್ತುಗಳ ಬಳಕೆ ಬೇಡ; ಜಿಲ್ಲಾಧಿಕಾರಿ

06:13 PM Jun 10, 2023 | Team Udayavani |

ಕಾರವಾರ: ಇಂದಿನ ದಿನಗಳಲ್ಲಿ ಪರಿಸರ ಸ್ವಚ್ಛತೆ  ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಪ್ಲಾಸ್ಟಿಕ್‌ ಹಾಗೂ ಕೊಳೆಯದೆ ಇರುವ ವಸ್ತುಗಳ ಅತೀಯಾದ ಬಳಕೆ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

Advertisement

ನಗರದ ರವೀಂದ್ರನಾಥ ಕಡಲತೀರದಲ್ಲಿ ವಿಶ್ವ ಸಾಗರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತ್ಛತೆ ಹಾಗೂ ಪ್ಲಾಸ್ಟಿಕ್‌ ಕುರಿತ ಬಳಕೆಯಲ್ಲಿ ಕೇವಲ ಸರಕಾರದ ಕೆಲಸವಾಗದೆ ಎಲ್ಲ ಜನಸಾಮಾನ್ಯರು ಕ್ರಿಯಾತ್ಮಕವಾಗಿ ಪಾಲ್ಗೊಂಡಾಗ ಮಾತ್ರ ಇಂಥಹ ಕಾರ್ಯಕ್ರಮ ಯಶಸ್ವಿಯಾಗುತ್ತವೆ. ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ನ್ನು ತಡೆಯಲು ಕೇಂದ್ರ ಸರಕಾರವು ದೊಡ್ಡ ಮಟ್ಟದ ಕಾರ್ಯಕ್ರಮ ತರಲಿದೆ ಎಂದರು.

ಡಾ| ರಾಠೊಡ ಮತ್ತು ಜಯೇಶ ಎ.ಸಿ.ಎಸ್‌ ಅವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮತ್ತು ಸಾಗರ ಮಾಲಿನ್ಯದ ಇಂದಿನ ಸ್ಥಿತಿಗತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ಅರಣ್ಯ ಇಲಾಖೆಯ ಸಿಬ್ಬಂದಿ
ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಮಾರು 1 ಕಿ.ಮೀ ಕ್ರಮಿಸಿ 566 ಕೆ.ಜಿ ವಿವಿಧ ರೀತಿಯ ತ್ಯಾಜ್ಯವನ್ನು ಸಂಗ್ರಹಿಸಿದರು. 140 ಕೆ.ಜಿ ಯಷ್ಟು ಗಾಜಿನ ಮದ್ಯದ ಬಾಟಲಿಗಳು, 70 ಕೆ.ಜಿ ಡೈಪರ್‌, 83 ಕೆ.ಜಿ ಇತರೆ ವಿವಿಧ ಪ್ಲಾಸ್ಟಿಕ್‌ ವಸ್ತುಗಳು, 28 ಕೆ.ಜಿ ಚಪ್ಪಲಿ ಮತ್ತು ಶ್ಯೂಗಳು, ಆಹಾರ
ಪೊಟ್ಟಣಗಳು, 5 ಕೆ.ಜಿ ಗಾಜಿನ ಬಾಟಲಿಗಳು, 4 ಕೆ.ಜಿ ಪ್ಲಾಸ್ಟಿಕ್‌ ಕಪ್‌, 5 ಕೆ.ಜಿ ಥರ್ಮೊಕೊಲ ಇತ್ಯಾದಿ ತ್ಯಾಜ ವಸ್ತುಗಳು ಸ್ವತ್ಛತೆಯ ವೇಳೆ ಸಂಗ್ರಹವಾದವು.

Advertisement

ಕ.ವಿ.ವಿ ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಶಾಹಿನ ಶೇಖ್‌, ಡಾ| ಜಗನ್ನಾಥ ಎಲ್‌. ರಾಠೊಡ, ಡಾ| ಶಿವಕುಮಾರ ಹರಗಿ, ಪ್ರಮೋದ ನಾಯಕ, ಅನು ನಾಯರ್‌, ಡಾ| ಗುಲ್ನಾಪ್‌, ಡಾ| ಪ್ರಜ್ಞಾ ಬಾಂದೇಕರ, ಡಾ| ಶ್ರೀದೇವಿ ಹಕ್ಕಿಮನಿ, ಸುಜಲ ರೇವಣಕರ, ಸೂರಜ ಪೂಜಾರ, ಶಾನವಾಜ ಕಡಪ, ಶ್ರೀ ರಾಮು ರಾಠೊಡ ಹಾಗೂ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next