ಚೆನ್ನೈ: ವಿಭಿನ್ನವಾಗಿ ವಿವಾಹವಾಗುವುದು ಈಗಿನ ಜೋಡಿಗಳ ಟ್ರೆಂಡ್. ಚೆನ್ನೈನಲ್ಲಿ ಜೋಡಿಯೊಂದು ಸಮುದ್ರದೊಳಕ್ಕೆ 60 ಅಡಿ ನೀರಿನ ಆಳದಲ್ಲಿ ಹೊಸ ಬಾಳಿಗೆ ಕಾಲಿಟ್ಟು ಎಲ್ಲರ ಹುಬ್ಬೇರಿಸಿದ್ದಾರೆ.
ವಿ. ಚಿನ್ನಾ ದುರೈ ಮತ್ತು ಎಸ್. ಶ್ವೇತಾ ನೀರಿನಾಳದಲ್ಲಿ ಹಿಂದೂ ಸಂಪ್ರದಾಯದಡಿ ಮದುವೆಯಾಗಿ ದಾಖಲೆ ನಿರ್ಮಿಸಿದ್ದಾರೆ.
ನೀರಿನೊಳಗೆ 45 ನಿಮಿಷಗಳ ಕಾಲ ವಿವಾಹ ಸಂಪ್ರದಾಯದಲ್ಲಿ ಪಾಲ್ಗೊಂಡು, ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿದ್ದಾರೆ.
12 ವರ್ಷಗಳಿಂದ ಸ್ಕೂಬಾ ಡೈವಿಂಗ್ ಅನುಭವ ಹೊಂದಿದ್ದ ವರ ಚಿನ್ನಾ ದುರೈ, ಸಂಗಾತಿ ಶ್ವೇತಾಗೆ ನೀರಿನಾಳದ ವಿವಾಹಕ್ಕಾಗಿ ಒಂದು ತಿಂಗಳಿಂದ ಟ್ರೈನಿಂಗ್ ನೀಡಿದ್ದರಂತೆ.
ಇದನ್ನೂ ಓದಿ:ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾನಾ ಪಟೋಲೆ ರಾಜೀನಾಮೆ
ಸೋಮವಾರ ಬೆಳಗ್ಗೆ 7.30ರ ಸುಮಾರಿನಲ್ಲಿ ವಿವಾಹ ಜರುಗಿದ್ದು, ವಧು- ವರರು ಸಾಂಪ್ರದಾಯಿಕ ಉಡುಗೆಯೊಂದಿಗೆ ಸಿಲಿಂಡರ್ ಲೈಫ್ ಜಾಕೆಟ್ ತೊಟ್ಟು ನೀರಿಗೆ ಧುಮುಕಿದ್ದರು.
“ಸಮುದ್ರದ ತಳಭಾಗಕ್ಕೆ ಹೋಗಿದ್ದು ಇದೇ ಮೊದಲು. ದೊಡ್ಡ ಮೀನುಗಳು ಈಜುವುದನ್ನು ಕಣ್ಣೆದುರೇ ನೋಡಿದೆ. ಜೀವನಪರ್ಯಂತ ಈ ಅನುಭವ ಮರೆಯಲಾರೆ’ ಎಂದು ವಧು ಶ್ವೇತಾ ಪುಳಕಿತರಾಗಿ ಹೇಳಿದ್ದಾರೆ.