ಉಡುಪಿ: ಆಕ್ಯುಪೇಶನಲ್ ತೆರಪಿಯೆನ್ನುವುದು ದೃಷ್ಟಿದೋಷ ಸಮಸ್ಯೆಯಿಂದ ಪಾರಾಗಲು ಅಗತ್ಯ ವಾಗಿದೆ. ಬೇರೆಯವರಿಗೆ ತೊಂದರೆ ನೀಡದೆ ಸ್ವಂತ್ರವಾಗಿ ಬದುಕಬೇಕಾದರೆ ಈ ತೆರಪಿಯ ಆವಶ್ಯಕತೆ ಇದೆ ಎಂದು ಕೆಎಂಸಿ ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಸುಲತಾ ಭಂಡಾರಿ ಹೇಳಿದರು.
ಮಾಹೆಯ ಆಕ್ಯುಪೇಶನಲ್ ತೆರಪಿ ವಿಭಾಗ, ಎಸ್‌ಓಎಎಚ್‌ಎಸ್ ವಿಭಾಗ ಆಯೋಜಿಸಿದ್ದ ದೃಷ್ಟಿದೋಷ ನಿವಾರಣೆಗೆ ಆಕ್ಯುಪೇಶನಲ್ ತೆರಪಿ ಕುರಿತ ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಈ ಸಮಸ್ಯೆ ನಿವಾರಣೆಗೆ ನೇತ್ರತಜ್ಞರ, ಮತ್ತು ತಂತ್ರಜ್ಞರ ಕಾರ್ಯಗಳ ಕುರಿತು ವಿವರಿಸಿದರು.
ಡಾ| ಅರುಣ್ ಜಿ.ಮಯ್ಯಸ್ವಾಗತಿಸಿ, ಇದು ವಯಸ್ಸಾದಂತೆ ಎಲ್ಲರಲ್ಲಿಯೂ ಕಾಣುವ ಸಾಮಾನ್ಯ ಸಮಸ್ಯೆಗಳೇ, ಆದರೆ ಅನಾರೋಗ್ಯಕಾರಿ ಜೀವನ ಶೈಲಿಯಿಂದ ಇದರ ಸಮಸ್ಯೆಗಳು ಇನ್ನೂ ಹೆಚ್ಚು ಕಾಡುತ್ತದೆ ಎಂದರು.
ಬೋಸ್ಟನ್ ಯುಎಸ್‌ಎಯ ಎಮ್‌ಜಿಎಚ್ ಇನ್ಸಿಟಿಟ್ಯೂಟ್‌ನ ಸಹಾಯಕ ಪ್ರಾಧ್ಯಾಪಕ ಕಿಂಬರ್ಲಿ ಆನ್ ಶಾಸ್ಕೋಯಿಸ್, ಆಕ್ಯೂಪೇಶನಲ್ ತೆರಪಿ ಕುರಿತು ಮತ್ತು ನಿರ್ವಹಿಸುವ ಕುರಿತು ವಿವರಿಸಿದರು.
ಆಕ್ಯುಪೇಶನಲ್ ತೆರಪಿ ವಿಭಾಗ ಮುಖ್ಯಸ್ಥೆ ಡಾ| ಸೆಬಿಸ್ತಿನಾ ಅನಿಟಾ ಡಿ’ಸೋಜಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಹಲವು ಆಕ್ಯುಪೇಶನಲ್ ತೆರಪಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.