Advertisement
ನಿರಾಸೆಯೊಂದಿಗೆ ಪ್ರಯಣಮೇ 30ರಂದು ತಂಗಿ ಮದುವೆ ನಿಗದಿಯಾಗಿತ್ತು. ಹಣ ಹೊಂದಿಸುವ ಉದ್ದೇಶದಿಂದ ನಾನು ಉಡುಪಿಗೆ ಬಂದೆ. ಎರಡೂವರೆ ತಿಂಗಳು ಕೆಲಸ ಮಾಡಿದೆ. ಎಲ್ಲಿತ್ತೋ ಈ ಕೋವಿಡ್-19 ಉಡುಪಿಗೂ ಒಕ್ಕರಿಸಿತು. ಈಗ ಇರುವ ಹಣ ಖಾಲಿಯಾಗಿದೆ. ತಂಗಿ ಮದುವೆ ಹೇಗೆ ಮಾಡಲಿ? ಮನೆಯಲ್ಲಿ ಹೇಗಾದರೂ ಮಾಡಿ ಮನೆಗೆ ಬಂದರೆ ಸಾಕು ಎನ್ನುತ್ತಿದ್ದಾರೆ. ಅಂದು ಸಾವಿರಾರು ಆಸೆ ಹೊತ್ತು ಬಂದೆ, ಇಂದು ನಿರಾಸೆಯಲ್ಲಿ ಹೊರಟೆ ಎಂದು ಕಾರ್ಮಿಕ ಬಿಸ್ರಾ ಪ್ರಸಾದ್ ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಆಶಯದೊಂದಿಗೆ ಉಡುಪಿಗೆ ಬಂದೆ. ನಮ್ಮ ಊರಿನಲ್ಲಿ ಕೂಲಿ ಕಡಿಮೆ ನೀಡುತ್ತಾರೆ. ಕಳೆದ 5 ವರ್ಷಗಳಿಂದ ಇದೇ ಊರಿನಲ್ಲಿ ನೆಲೆಸಿದ್ದೇನೆ. ಜೂನ್-ಜುಲೈ ತಿಂಗಳಿನಲ್ಲಿ ಫೀಸ್ ಕಟ್ಟಬೇಕು. ಇರುವ ಹಣ ಖಾಲಿಯಾಗಿದೆ. ಲಾಕ್‌ಡೌನ್ ತೆರೆದ ಅನಂತರ ಮತ್ತೆ ಉಡುಪಿ ಬರುವೆ ಎಂದು ಕಾರ್ಮಿಕ ಅನೂಪ್ ತಿಳಿಸಿದರು. ಹೋಗಿ ಮತ್ತೆ ಬರುವೆ!
ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆತ್ತವರು ಮನೆಗೆ ಬರುವಂತೆ ಹಠ ಮಾಡುತ್ತಿದ್ದಾರೆ. ಎರಡು ತಿಂಗಳಿನಿಂದ ಊರಿಗೆ ಹೋಗಲು ಪ್ರಯತ್ನಿಸಿದೆ. ಇದೀಗ 950 ರೂ. ನೀಡಿ ಮನೆಗೆ ಹೊರಟೆ. ಕೋವಿಡ್-19 ಕಡಿಮೆಯಾದರೆ ಮತ್ತೆ ಉಡುಪಿಗೆ ಬರುವೆ ಎಂದು ರಬೀಂದ್ರ ತಿಳಿಸಿದರು.
Related Articles
ಮೂರು ವರ್ಷಗಳಿಂದ ಉಡುಪಿ, ಮಣಿಪಾಲದಲ್ಲಿ ಕೆಲಸ ಮಾಡಿಕೊಂಡು ಇದ್ದೇನೆ. ಸದ್ಯ ಶೇಖರಿಸಿದ ಎಲ್ಲ ಹಣ ಖರ್ಚಾಗಿದೆ. ಇನ್ನೂ ಲಾಕ್‌ಡೌನ್ ಮುಂದುವರಿದರೆ ಬದುಕುವುದು ಕಷ್ಟ . ಮನೆಯಲ್ಲಿ ಇದ್ದರೆ ಒಂದು ಹೊತ್ತಿನ ಗಂಜಿ ಕುಡಿದು ಬದುಕುವೆ, ಇಲ್ಲವೇ ಅಲ್ಲಿಯೇ ಸಾಯುವೆ ಎಂದು ಕಾರ್ಮಿಕ ವಿಶ್ವಾಸ್ ಬೇಸರ ವ್ಯಕ್ತಪಡಿಸಿದರು.
Advertisement