Advertisement

ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ ಬಳ್ಕೂರು ಗ್ರಾ.ಪಂ.

10:43 PM May 13, 2020 | Sriram |

ಬಸ್ರೂರು: ಕಳೆದ 40ಕ್ಕೂ ಹೆಚ್ಚು ದಿನಗಳಿಂದ ದೇಶವೇ ಕೋವಿಡ್- 19 ಕಾರಣ ಲಾಕ್‌ಡೌನ್‌ನಿಂದ ಬಂಧಿಯಾಗಿದೆ. ಪರಿಣಾಮ ದೇಶದಲ್ಲೇ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದಂತೆ ಮಾಡಿ ಜನ ಆನಿವಾರ್ಯವಾಗಿ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಸಂದರ್ಭ ಉಂಟಾಗಿತ್ತು. ಆದರೆ ಬಳ್ಕೂರು ಗ್ರಾಮದಲ್ಲಿ ಗ್ರಾ.ಪಂ.ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಮಾದರಿಯಾಗಿದೆ.

Advertisement

ವಾರ್ಡ್‌ ನಂ.1ರ ಹೊಯಿಗೆ ಸಾಲಿನ ಹೂಳೆತ್ತುವ ಕಾರ್ಯ ಈಗಲೂ ನಡೆಯುತ್ತಿದೆ. ಹಲವು ವರ್ಷಗಳ ಅನಂತರ ತೋಡು ಸಂಪೂರ್ಣವಾಗಿ ಸ್ವತ್ಛಗೊಳ್ಳುತ್ತಿದೆ. ಇದರಿಂದ ರೈತರಿಗೆ ಮಳೆಗಾಲದಲ್ಲಿ ಆಗುವ ತೊಂದರೆಗೆ ಪರಿಹಾರವೂ ಸಿಕ್ಕಿದಂತಾಗಿದೆ. ಮತ್ತು ಮಳೆಗಾಲದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.

ಈ ಕಾಮಗಾರಿ ಮಾತ್ರವಲ್ಲದೇ ಆಲ್ಕೆರೆ ಬಳಿ ಕೃಷಿ ತೋಡನ್ನು ಸ್ವಚ್ಛಗೊಳಿಸಲಾಗುತ್ತಿದೆ ಎನ್ನುವುದು ಗಮನಾರ್ಹವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next