Advertisement

ಜಿಲ್ಲೆಯ ಪರಿಸ್ಥಿತಿ ಸಚಿವರಿಂದ ಅವಲೋಕನ

03:03 PM Apr 17, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲಾ ಉಸ್ತು ವಾರಿ ಸಚಿವರೂ ಆಗಿರುವ ಉಪಮುಖ್ಯ ಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೂಚಿಸಿದ್ದಾರೆ. ಬೆಂಗಳೂರಿನ ತಮ್ಮ ಕಚೇರಿಯಿಂದ ಜಿಲ್ಲೆಯ ಸಂಸ ದರು, ಶಾಸಕರು, ಚುನಾಯಿತ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳೊಂದಿಗೆ ವರ್ಚುಯಲ್‌ ಸಭೆಯಲ್ಲಿ ಮಾತನಾಡಿದರು.

Advertisement

ಕ್ಷಿಪ್ರಗತಿಯಲ್ಲಿ ಸೋಂಕಿತರ ಪತ್ತೆ, ಕ್ಷಿಪ್ರಗತಿಯಲ್ಲಿ ಸ್ವಾಬ್‌ಟೆಸ್ಟ್‌ ನೀಡುವುದು ಮತ್ತು ಸೋಂಕಿತರಿಗೆ ತಡಮಾಡದೆ ಚಿಕಿತ್ಸೆ ಆರಂಭಿಸುವ ಮೂರು ಸೂತ್ರಗಳನ್ನು ಉಪಮುಖ್ಯಮಂತ್ರಿಗಳು ನೀಡಿದ್ದು, ಅದರ ಪ್ರಕಾರ ಆರೋಗ್ಯ ಇಲಾಖೆ ಮತ್ತು ಇತರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮಬದ್ದವಾಗಿ ಕೋವಿಡ್‌ ಸ್ಥಿತಿಯನ್ನು ನಿರ್ವಹಿಸುವಂತ ಸೂಚನೆ ನೀಡಿದ್ದಾರೆ.

ಲಸಿಕೆ ಅಭಿಯಾನ ತೀವ್ರಗೊಳಿಸಲು ಸೂಚನೆ: ಕೋವಿಡ್‌ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡುವ ಜೊತೆಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಡಿಸಿ ಎಂ ಸೂಚಿಸಿದರು. ಸರ್ಕಾರದ ಮಾರ್ಗಸೂಚಿ ಯಂತೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ತಪ್ಪದೇ ಲಸಿಕೆ ಕೊಡ ಬೇಕು. ಅದಕ್ಕೆ ಬೇಕಾದ ಎಲ್ಲ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಲಕ್ಷಣ ಇದ್ದ ಎಲ್ಲರಿಗೂ ಪರೀಕ್ಷೆ ಮಾಡಲು ಸಲಹೆ: ಕೋವಿಡ್‌ ಲಕ್ಷ್ಮಣಗಳಾದ ಜ್ವರ, ಶೀತ, ಕೆಮ್ಮು ಇತ್ಯಾದಿ ಲಕ್ಷಣಗಳು ಇರುವ ನಾಗರಿಕರನ್ನು ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸಿ, ಪಾಸಿಟಿವ್‌ ಎಂದು ವರದಿ ಬಂದ ಕೂಡಲೆ ಅಗತ್ಯ ಚಿಕಿತ್ಸೆ ಆರಂಭಿಸಿ ಎಂದು ಸಲಹೆ ನೀಡಿದರು. ಸಿಂಪ್ಟೋಮ್ಯಾಟಿಕ್‌ (ಲಕ್ಷಣಗಳು ಉಳ್ಳ) ಅಥವಾ ಅಸಿಂಪ್‌ಟೋಮ್ಯಾಟಿಕ್‌ (ಲಕ್ಷಣರಹಿತ) ಎಂದು ವಿಂಗಡಣೆ ಮಾಡುವುದು ಬೇಡ. ಸೋಂಕು ಇರುವುದು ಗೊತ್ತಾದ ತಕ್ಷಣ ಚಿಕಿತ್ಸೆ ಆರಂಭಿಸಿ, ತನ್ಮೂಲಕ ದೇಹದಲ್ಲಿ ಸೋಂಕು ಉಲ್ಬಣಿಸುವುದನ್ನು ತಡೆಯಬಹುದು ಎಂದರು.

ಸಿಬ್ಬಂದಿ ಕೊರತೆ ಆಗಬಾರದು: ಸಭೆಯಲ್ಲಿ ಭಾಗವ ಹಿಸಿದ್ದ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ಅವರು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಅವರು, ಕೂಡಲೇ ಅಗತ್ಯ ಇರುವ ಕಡೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಂಪನ್ಮೂಲ ಕೊರತೆ ಕಂಡು ಬಂದರೆ ವಿಪತ್ತು ನಿರ್ವಹಣಾ ನಿಧಿಯಿಂದ ವೆಚ್ಚ ಮಾಡಲು ಸಲಹೆ ನೀಡಿದರು.

Advertisement

ಜನಪ್ರತಿನಿಧಿಗಳ ಸಲಹೆಗೆ ಕಿವಿಗೊಡಿ: ಜಿಲ್ಲೆಯಲ್ಲಿ ಸೋಂಕು ತಡೆಗೆ ಅಧಿಕಾರಿಗಳು ಸರ್ಕಾರದ ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಈ ಮಧ್ಯೆ ಜಿಲ್ಲೆಯ ಜನ ಪ್ರತಿನಿಧಿಗಳ ಸಲಹೆಗಳನ್ನು ಆಲಿಸಿ, ಆಕ್ಷೇಪಗಳಿಗೆ ಕಿವಿಗೊಡಿ. ಅವರ ಸಹಕಾರ ಪಡೆದುಕೊಳ್ಳಿ ಎಂದು ಡಿಸಿ ಎಂ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಸಮಸ್ಯೆ ಕಾಣಿಸಿಕೊಂಡರು ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯಿರಿ ಎಂದರು.

ಲಸಿಕೆ ಪಡೆಯಲು ಮನವೊಲಿಸಿ: ಅಲ್ಪಸಂಖ್ಯಾತ ಸಮುದಾಯದವರೂ ಸೇರಿ ಕೆಲವರು ಲಸಿಕೆ ಪಡೆ ಯಲು ಹಿಂದೇಟು ಹಾಕುತ್ತಿರುವ ದೂರುಗಳು ಬಂದಿವೆ. ಅವರನ್ನು ಮನವೊಲಿಸಿ ಲಸಿಕೆ ಪಡೆಯು ವಂತೆ ಮಾಡಿ. ಅದಕ್ಕೆ ಚುನಾಯಿತ ಪ್ರತಿನಿಧಿಗಳ ಸಹ ಕಾರ ಪಡೆಯಿರಿ. ಯಾವ ಕಾರಣಕ್ಕೂ ಲಸಿಕೆ ಅಭಿ ಯಾನ ವ್ಯತ್ಯಾಸ ಆಗಬಾರದು ಎಂದರು. ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್‌, ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕೆಲ ಉತ್ತಮ ಸಲಹೆಗಳನ್ನು ನೀಡಿ ರುವುದಾಗಿ, ಅವುಗಳನ್ನು ಅಳವಡಿಸಿಕೊಳ್ಳುವುದಾಗಿ ಡಿಸಿಎಂ ತಿಳಿಸಿದರು. ಜಿÇÉಾಧಿಕಾರಿ ಡಾ.ರಾಕೇಶ್‌ ಕುಮಾರ್‌.ಕೆ., ಸಿಇಒ ಇಕ್ರಂ ಷರೀಪ್‌, ಎಸ್ಪಿ ಗಿರೀಶ್‌, ಡಿ.ಎಚ್‌.ಒ ಡಾ.ನಿರಂಜನ್‌ ಮುಂತಾದವರು ಭಾಗವ ಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next