ದಾಂಡೇಲಿ: ಹಲವು ಸಮಸ್ಯೆಗಳು ಅಲ್ಲಿದ್ದರೂ ಅದು ಸುಂದರ ಮತ್ತು ವಿಶಾಲವಾದ ಬಸ್ ನಿಲ್ದಾಣ. ಬಸ್ ನಿಲ್ದಾಣ ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ ಹೊಂದಿದ್ದು, ಆ ಕೊಠಡಿಯೊಳಗಿನ ಗೋಡೆಯಲ್ಲಿ ಬರೆದಿರುವ ಅಸಭ್ಯ ನಡವಳಿಕೆಯ ಪ್ರೇಮ ಬರಹಗಳು ಹಾಗೂ ಚಿತ್ರಗಳು ಅಸಹ್ಯ ಎನಿಸುವಂತಿದೆ.
ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯ ಗೋಡೆಯಲ್ಲಿ ಕೆಲ ಅಸಭ್ಯ ನಡವಳಿಕೆಯ ಬರಹಗಳು ಕಂಡು ಬಂದಿದೆ.
ಹಾಗೆಂದ ಮಾತ್ರಕ್ಕೆ ಈ ಕೊಠಡಿಯ ಒಳಗಡೆ ಪುರುಷರಿಗೆ ಪ್ರವೇಶವಿಲ್ಲ. ಹಾಗಾದ್ರೆ ಈ ರೀತಿಯ ಅಸಭ್ಯ ಬರಹಗಳನ್ನು ಯಾರು ಬರೆದಿರಬಹುದು, ಗೀಚಿರಬಹುದೆಂಬ ಮಾಧ್ಯಮದವರ ಪ್ರಶ್ನೆಗೆ ಯುವತಿಯರು ಈ ಕೃತ್ಯವನ್ನು ಮಾಡಿದ್ದಾರೆ ಎನ್ನುವ ವಾಸ್ತವಾಂಶ ಬೆಳಕಿಗೆ ಬಂದಿದೆ.
ಹೆಣ್ಣೊಂದು ಕಲಿತರೆ ಮನೆ ಮಂದಿ ಕಲಿತಂತೆ ಎಂಬ ಗಾದೆಯಿದೆ. ಅದೇ ರೀತಿ ಹೆಣ್ಣೊಂದು ಈ ರೀತಿ ಬರೆದರೆ ಮುಂದೇನು ಎನ್ನುವ ಪ್ರಶ್ನೆ ಚರ್ಚೆಯಲ್ಲಿದೆ.
ಇನ್ನಾದರೂ ಈ ರೀತಿಯ ವಿಲಕ್ಷಣ ಬರಹಗಳನ್ನು ಬರೆಯುವುದನ್ನು ನಿಲ್ಲಿಸಬೇಕೆಂಬ ಮನವಿಯನ್ನು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.