Advertisement

ಹಣದ ಹಿಂದೆ ಹೋಗುವ ಧಾವಂತದಲ್ಲಿ ಪ್ರಕೃತಿಯ ಮರೆವು: ಸತೀಶ್ಚಂದ್ರ

07:49 PM Jun 03, 2019 | Sriram |

ಪೆರ್ಲ: ಮನುಷ್ಯ ಹಣದ ಹಿಂದೆ ಹೋಗುವ ಧಾವಂತದಲ್ಲಿ ಪ್ರಕೃತಿಯು ನೀಡಿದ ಹಣ್ಣಿನ ಗಿvಗಳ‌ನ್ನು ಬೆಳೆಸುವುದನ್ನು ಮರೆತಿದ್ದಾನೆ.ಹಣ ಕೊಟ್ಟರೆ ಯಾವುದನ್ನೂ ಪಡೆಯ ಬಹುದು ಎಂದು ಭಾವಿಸಿದ್ದಾನೆ.ಆದರೆ ನಮ್ಮ ಹಿತ್ತಿಲಲ್ಲಿ ನಾವೇ ಹಣ್ಣುಗಳ ಗಿಡಗಳನ್ನು ಬೆಳೆಸಿದರೆ ತಾಜಾ ಹಣ್ಣು ಲಭಿಸುತ್ತದೆ.ರೋಗಗಳಿಂದಲೂ ಮುಕ್ತಿ ಲಭಿಸಲು ಸಾಧ್ಯ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಹೇಳಿದರು.


Advertisement

ಅವರು ಜೂ.2ರಂದು ಪೆರ್ಲ ಶ್ರೀ ಶಂಕರ ಸದನದಲ್ಲಿ ನಡೆದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌,ಶ್ರೀ ಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಪುತ್ತೂರು,ಶ್ರೀ ಶಂಕರ ಸೇವಾ ಸಮಿತಿ ಪೆರ್ಲ ಇವುಗಳ ನೇತೃತ್ವದಲ್ಲಿ ಹಾಗೂ ಪೆರ್ಲ ಅಕ್ಷಯ ಕೃಷಿಕೂಟ,ಪೆರ್ಲ ಎಸ್‌ಎನ್‌ ನೇಚರ್‌ ಕ್ಲಬ್‌, ಬೇಂಗಪದವು ಎಸ್‌ಜಿಎಎಲ್‌ಪಿ ಶಾಲೆ ಪಿಟಿಎ.‌ಸಹಕಾರದಲ್ಲಿ ವಿಶೇಷ ಕಾರ್ಯಕ್ರಮವಾದ ಹಣ್ಣುಗಳ ಹಬ್ಬ ಹ ಹ! ಪೆರ್ಲ-2019 ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ನಮ್ಮ ತೋಟಗಳಲ್ಲಿ ಪರ್ಯಾಯ ಬೆಳೆಗಳಾಗಿ ಹಣ್ಣಿನ ಗಿಡ ಬೆಳೆಸಿದರೆ ಪ್ರಧಾನ ಬೆಳೆಗೂ ಉಪಯುಕ್ತ.ನಿತ್ಯ ಹರಿತವರ್ಣ ಮರಗಳಾಗುವ ಗಿಡ ನೆಟ್ಟರೆ ಅಡಿಕೆಯಂಥಹ ಹೆಚ್ಚು ನೀರಿನ ಅಗತ್ಯವಿರುವ ಬೆಳೆ ಬೇಸಗೆಯಲ್ಲೂ ಒಣಗುವುದಿಲ್ಲ ಎಂದು ತಮ್ಮ ಅನುಭವವನ್ನು ತಿಳಿಸಿದರು.

ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಕಾರ್ಯಕ್ರಮ ಉದ್ಘಾಟಿಸಿ,ಇಂದು ಹಳ್ಳಿಗಳಲ್ಲಿ ವಿವಿಧ ಕಾರಣಗಳಿಂದ ಫಲ ನೀಡುವ ಮರಗಳನ್ನು ಕಡಿಯುತ್ತಾರೆ.ದೀರ್ಘ‌ ಕಾಲ ಬೆಳೆಯುವ ಮರಗಳನ್ನು ಬೆಳೆಸುವುದರಿಂದ ಬಹುಕಾಲ ಹಣ್ಣು ಲಭಿಸುವುದರೊಂದಿಗೆ ನೀರಿನ ಇಂಗುವಿಕೆಗೂ ಕಾರಣವಾಗುತ್ತದೆ ಎಂದು ಹೇಳಿದರು ಪೆರ್ಲ ಸೇ.ಸ.ಬ್ಯಾಂಕ್‌ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ , ಶ್ರೀಧರ ಭಟ್‌ ಶುಭ ಹಾರೈಸಿದರು.. ಆನಂದ ಅಡ್ಕಸ್ಥಳ ವಂದಿಸಿದರು. ಉಮೇಶ್‌ ಕೆ.ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

ಹಣ್ಣುಗಳ ಸಂಸ್ಕರಣೆ ಅಗತ್ಯ: ಶ್ರೀಪಡ್ರೆ
ಪರಿಸರ ತಜ್ಞ ,ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಿದರು. ಸಾಧಾರಣ ಹಿತ್ತಲಿನ ಗಿಡಗಳಾದ ಬಿಂಬ್ಲಿ ,ಕರಂಡೆ,
ಅಂಜೂರ,ಸೀಬೆ,ಪಪ್ಪಾಯ ಹಣ್ಣುಗಳನ್ನು ನಾವು ಬಳಸುವುದು ಕಡಿಮೆ.ಹಲಸಿನ ಬಳಕೆ ಕೂಡ ಸೀಮಿತ ವಾಗಿದೆ.ಆದ್ದರಿಂದ ಹಣ್ಣುಗಳ ಸಂಸ್ಕರಣೆ ಆಗ ಬೇಕು.ಹಣ್ಣುಗಳು ಆನಂದ,ಆರೋಗ್ಯ ಜತೆಗೆ ಆದಾಯವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಬಳಿಕ ವಿವಿಧ ಹಣ್ಣಿನ ಕೃಷಿ ಮಾಡುವ ಕೃಷಿತಜ್ಞ ಅನಿಲ್‌ ಬಳಂಜ ಅವರಿಂದ ಸಮಗ್ರ ಮಾಹಿತಿ,ಪ್ರಾತ್ಯಕ್ಷಿಕೆ ನಡೆಯಿತು.ಕಾರ್ಯಕ್ರಮದ ಪ್ರಯುಕ್ತ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟ ಹಲವಾರು ಹಣ್ಣಿನ ಗಿಡಗಳು,ಆಹಾರೊತ್ಪನ್ನಗಳು,ಖಾದ್ಯ ವೈವಿಧ್ಯಗಳು,ಉಪಕರಣಗಳು ನೆರೆದ ಜನರ ತನುಮನ ತಣಿಸುವುದರೊಂದಿಗೆ ವಿಶೇಷ ಆಕರ್ಷಣೆ ಕುತೂಹಲ ಉಂಟುಮಾಡಿತು.ಕೃಷಿಪೂರಕ ರಸಪ್ರಶ್ನೆ,ಹಲಸಿನ ಹಣ್ಣು ತಿನ್ನುವ ಸ್ಪರ್ಧೆಗಳು ಕೃಷಿ ಪ್ರೇಮಿಗಳಿಗೆ ಕೌತುಕವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next