Advertisement

“ಧ್ಯೇಯೋದ್ದೇಶಗಳನ್ನು ಪಾಲಿಸಿದರೆ ಯಶಸ್ಸು ಗಳಿಸಲು ಸಾಧ್ಯ’

02:50 AM Jul 13, 2017 | |

ಸುಳ್ಯ : ಪ್ರತಿಯೊಂದು ಸಂಸ್ಥೆಗೂ ಅದರದ್ದೇ ಆದ ಧ್ಯೇಯ-ಉದ್ದೇಶಗಳಿರುತ್ತವೆ. ಅದನ್ನು ಅರಿತು ಸಂಸ್ಥೆಗೆ ಸೇರಿ ಪಾಲಿಸಿದಾಗ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕೆವಿಜಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಎನ್‌. ಆರ್‌. ಗಣೇಶ್‌ ಅಭಿಪ್ರಾಯಪಟ್ಟರು.

Advertisement

ಅವರು ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾ ಮನೋಭಾವನೆಯಿಂದ ಹುಟ್ಟಿಕೊಂಡ ಅಂತಾರಾಷ್ಟ್ರೀಯ ಸಂಸ್ಥೆ  ರೆಡ್‌ಕ್ರಾಸ್‌ ಪ್ರಪಂಚದಾದ್ಯಂತ ಕರ್ತವ್ಯ ನಿರ್ವಹಿಸುತ್ತಿದೆ. ಅದರ ವಿದ್ಯಾರ್ಥಿಗಳಲ್ಲಿ  ನೈತಿಕತೆಯನ್ನು ಮೂಡಿಸುತ್ತದೆ. ಆ ನಿಟ್ಟಿನಲ್ಲಿ  ವಿದ್ಯಾರ್ಥಿಗಳು ಇಂತಹ ಸಂಸ್ಥೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
 
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಗಿರಿಧರ ಗೌಡ ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ. ಕೆಲವು ವರ್ಷಗಳಿಂದ ಯುವ ರೆಡ್‌ಕ್ರಾಸ್‌ ಘಟಕ ಪಠ್ಯೇತರ ಚಟುವಟಿಕೆಯ ಒಂದು ಭಾಗವಾಗಿ ನಮ್ಮ ಸಂಸ್ಥೆಯಲ್ಲಿ  ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷದ ಚಟುವಟಿಕೆಗಳಿಗೆ ರಾಜ್ಯ ಸಂಸ್ಥೆಯಿಂದ ಒಳ್ಳೆಯ ಪ್ರಶಂಶೆಯೂ ಬಂದಿದೆ. ಪ್ರಸ್ತುತ ವರ್ಷ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಸ್ಥೆಗೆ ಕೊಡುಗೆಯನ್ನು  ನೀಡಿ ಎಂದರು.

ಕಾರ್ಯಕ್ರಮಾ ಧಿಕಾರಿ ಡಾ| ಅನುರಾಧಾ ಕುರುಂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ವರ್ಷ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ಬಗ್ಗೆ  ಮಾಹಿತಿ ನೀಡಿದರು.ಕೆವಿಜಿ ಮೆಡಿಕಲ್‌ ಕಾಲೇಜಿನ ನೇತ್ರಾ ಚಿಕಿತ್ಸಾ ವಿಭಾಗದ ಡಾ| ಅಕ್ಷತಾ ಚಂಡಕಿ, ಘಟಕದ ವಿದ್ಯಾರ್ಥಿ ಸಂಚಾಲಕ ಶಶಾಂಕ ಫಡೆR,  ನಾಯಕರಾದ‌ ಹೇಮಕಿರಣ ಕೆ.ಎಂ. ಹಾಗೂ ದೇವಿಕಾ ಎನ್‌.ಜಿ., ದೀಪ್ತಿ ಸಿ. ವಿ. ಸ್ವಾಗತಿಸಿ, ದೃಶ್ಯಾ ಕೆ.ಜಿ. ವಂದಿಸಿದರು. ಹರ್ಷಿತಾ ಕೆ. ಎಂ.  ನಿರೂಪಿಸಿದರು. 

ನೇತ್ರಾ ಚಿಕಿತ್ಸಾ ವಿಭಾಗದ ನಿಶಾ, ಉಪನ್ಯಾಸಕ ಶ್ರೀಧರ್‌ ವಿ., ಘಟಕದ ಹಿರಿಯ ವಿದ್ಯಾರ್ಥಿಗಳಾದ ಸಮೀûಾ ರೈ ಎಸ್‌., ಸಿಂಧೂರ ಎನ್‌.ಸಿ. ಉಪಸ್ಥಿತರಿದ್ದರು. ಸೌಜನ್ಯಾ ರೈ ಬಿ.ಎಸ್‌., ಸುರûಾ ಪಿ.ಎಸ್‌. ಹಾಗೂ ದೇವಿಕಾ ವೈ. ಪ್ರಾರ್ಥಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next