Advertisement

ವಸ್ತುನಿಷ್ಠ ವ್ಯಂಗ್ಯಚಿತ್ರ ರಚನೆ ಅಗತ್ಯ

12:35 AM Mar 15, 2020 | Lakshmi GovindaRaj |

ಬೆಂಗಳೂರು: ಹಿರಿಯ ವ್ಯಂಗ್ಯಚಿತ್ರಕಾರ ಆರ್‌.ಕೆ.ಲಕ್ಷ್ಮಣ್‌ ಅವರ ರೀತಿಯಲ್ಲಿ ವ್ಯಂಗ್ಯಚಿತ್ರಕಾರರು ವಸ್ತುನಿಷ್ಠವಾಗಿ ಸತ್ಯದ ಪರವಾಗಿ ಚಿತ್ರಗಳನ್ನು ಬರೆಯಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ ಎಸ್‌.ಎನ್‌. ಸೇತುರಾಮ್‌ ಹೇಳಿದರು.

Advertisement

ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ವ್ಯಂಗ್ಯಚಿತ್ರಕಲಾವಿದ ಮೇಗರವಳ್ಳಿ ಸುಬ್ರಹ್ಮಣ್ಯ ಅವರ ವ್ಯಂಗ್ಯಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಪುಟದಲ್ಲಿ ಹೇಳುವ ವಿಷಯವನ್ನು ಒಂದು ಗೆರೆಯ ಮೂಲಕ ಹೇಳುವ ಶಕ್ತಿ ವ್ಯಂಗ್ಯಚಿತ್ರಕಾರರಿಗಿದೆ ಎಂದರು. ವ್ಯಂಗ್ಯಚಿತ್ರಕಾರರಿಗೆ ಬರೆಯುವ ವಿಷಯದ ಬಗ್ಗೆ ಆಳ ಜ್ಞಾನ ಹೊಂದಿರಬೇಕು.

ಇಲ್ಲದಿದ್ದರೆ ಆ ಚಿತ್ರಗಳು ಅರ್ಥ ಕಳೆದು ಕೊಳ್ಳುತ್ತವೆ. ಹಾಸ್ಯಪ್ರಜೆಯ ಜತೆಗೆ ವಿಷಯವಂತಿಕೆ ಕೂಡ ವ್ಯಂಗ್ಯಚಿತ್ರಕಾರರಲ್ಲಿಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಿಕೆ, ನಿಯತಕಾಲಿಕೆಗಳು ರಾಜಕೀಯ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಅವುಗಳಲ್ಲಿ ಪ್ರಕಟವಾಗುವ ವ್ಯಂಗ್ಯಚಿತ್ರಗಳು ತಮ್ಮ ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ದೂರಿದರು.

ಹಿರಿಯ ವ್ಯಂಗ್ಯಚಿತ್ರಕಾರ ಮೇಗರವಳ್ಳಿ ಸುಬ್ರಹ್ಮಣ್ಯ ಮಾತನಾಡಿ, 70ರ ದಶಕದಲ್ಲಿ ವ್ಯಂಗ್ಯಚಿತ್ರಗಳಿಗೆ ಅಪಾರ ಪ್ರೋತ್ಸಾಹವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳಿಗಿದ್ದ ಮೌಲ್ಯ ಕಡಿಮೆಯಾಗುತ್ತಿದೆ ಎಂದು ಹೇಳಿದರು. ಪ್ರದರ್ಶನದಲ್ಲಿ ಸುಮಾರು 71 ವ್ಯಂಗ್ಯಚಿತ್ರಗಳನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ, ಸದಸ್ಯ ನಂಜುಂಡಸ್ವಾಮಿ, ರಘುಪತಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next