ಮುಂಬಯಿ: ಕುರ್ಕಾಲರು ಓರ್ವ ದೇಶಪ್ರೇಮಿ ಸಾಹಿತಿಯಾಗಿದ್ದು, ಅವರು ಮಕ್ಕಳಿಗೆ ದೇಶಪ್ರೇಮದ ತಿಳಿವಳಿಕೆಯನ್ನು ಮೂಡಿಸುತ್ತಿದ್ದರು. ಓರ್ವ ಉತ್ತಮ ಅಧ್ಯಾಪಕರಾಗಿ ಅನೇಕ ಶಿಷ್ಯವೃಂದವರನ್ನು ಹೊಂದಿರುವ ಇವರ ಸಾಹಿತ್ಯವು ಮಕ್ಕಳಿಗೆ ಹಾಗೂ ಹಿರಿಯರಿಗೆ ಸದಾಭಿರುಚಿಯನ್ನು ಉಂಟುಮಾಡುವಂಥದ್ದಾಗಿದೆ. ಅವರು ಬೋಂಬೆ ಬಂಟ್ಸ್ ಅಸೋಸಿಯೇಶನ್ ಮುಖವಾಣಿ ಪತ್ರಪುಷ್ಪದ ಸಂಪಾದಕರಾಗಿ ಆ ಪತ್ರಿಕೆಗೆ ವಿನೂತನ ಮೆರುಗನ್ನು ನೀಡಿ ಅದರ ಬೆಳವಣಿಗೆಗೆ ಶ್ರಮಿಸಿದವರಾಗಿದ್ದಾರೆ ಎಂದು ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.
ನ. 21ರಂದು ಸಂಜೆ ಸಯಾನ್ ಪಶ್ಚಿಮದ ನಿತ್ಯಾನಂದ ಸಭಾಗೃಹದಲ್ಲಿ ಬೋಂಬೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಕವಿ, ಸಾಹಿತಿ, ಶಿಕ್ಷಕ ಬಿ. ಎಸ್. ಕುರ್ಕಾಲ್ ಅವರ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುರ್ಕಾಲರು ಹಿರಿಯ ಸಾಹಿತಿಗಳಿಗೆ ಪ್ರೇರಣೆಯಾಗಿದ್ದು, ಅವರ ಸಮಾಜಪರ ಕಾಳಜಿಯು ಮೆಚ್ಚುವಂಥದ್ದಾಗಿದೆ ಎಂದು ನುಡಿದು ನುಡಿನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಕುರ್ಕಾಲರು ಮಕ್ಕಳೊಂದಿಗೆ ಮಕ್ಕಳಾಗಿ ಹಿರಿಯರೊಂದಿಗೆ ಹಿರಿಯವರಾಗಿ ಬೆರೆಯುತ್ತಿದ್ದ ಓರ್ವ ಶಿಕ್ಷಕ. ಅವರ ಸಾಹಿತ್ಯವು ಸಾಮಾಜಿಕ ಕಳಕಳಿಯಿಂದ ಕೂಡಿತ್ತು. ಸಾಹಿತ್ಯ ಲೋಕದಲ್ಲಿ ಅವರ ಹೆಸರು ಸದಾ ಸ್ಮರಣೀಯವಾಗಿರುತ್ತದೆ ಎಂದು ನುಡಿದರು.
ರಂಗನಟ ಮೋಹನ್ ಮಾರ್ನಾಡ್ ಮಾತನಾಡಿ, ಬಿ. ಎಸ್. ಕುರ್ಕಾಲರ ಲೇಖನ ಹಾಗೂ ಕವಿತೆಗಳನ್ನು ಓದುವುದೇ ಒಂದು ರೀತಿಯ ಆನಂದವನ್ನು ಉಂಟು ಮಾಡುತ್ತದೆ. ಅವರ ಎಲ್ಲ ಕೃತಿಗಳನ್ನು ಓದುವುದರ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ ಎಂದರು.
ಬಿ. ಎಸ್. ಕುರ್ಕಾಲರ ಆತ್ಮೀಯ ಒಡನಾಡಿಯಾಗಿದ್ದ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎನ್. ಸಿ. ಶೆಟ್ಟಿ, ಎಚ್. ಬಿ. ಎಲ್. ರಾವ್, ಎಸ್. ಕೆ. ಭವಾನಿ, ಪದ್ಮಶಾಲಿ ಸೇವಾ ಸಂಘದ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಜಯಕರ ಪೂಜಾರಿ, ಶ್ಯಾಮ್ ಶೆಟ್ಟಿ, ಶೈಲಜಾ ಶೆಟ್ಟಿ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ನ್ಯಾಯವಾದಿ ಆನಂದ ಶೆಟ್ಟಿ, ಕೆ. ಕೆ. ಶೆಟ್ಟಿ, ನ್ಯಾಯವಾದಿ ರತ್ನಾಕರ ಶೆಟ್ಟಿ, ವಿಶ್ವನಾಥ ಶೆಟ್ಟಿ ಪೇತ್ರಿ, ಪತ್ರಕರ್ತ ದಯಾಸಾಗರ್ ಚೌಟ, ಪತ್ರಪುಷ್ಪದ ಸಂಪಾದಕ ರಾಮ್‌ಮೋಹನ್ ಬಳುRಂಜೆ, ಬಾಲಚಂದ್ರ ಕಟಾ³ಡಿ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿ ನುಡಿನಮನ ಸಲ್ಲಿಸಿದರು.
ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆಯೊಂದಿಗೆ ಬಿ. ಎಸ್. ಕುರ್ಕಾಲರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಸದಸ್ಯರು, ನಗರದ ವಿವಿಧ ಜಾತೀಯ ಹಾಗೂ ತುಳು-ಕನ್ನಡಪರ ಸಂಘಟನೆಗಳ ಪದಾಧಿಕಾರಿ ಗಳು, ಸದಸ್ಯರು, ಸಾಹಿತಿಗಳು, ಸಾಹಿತ್ಯಾಭಿಮಾನಿ
ಗಳು, ಕುರ್ಕಾಲರ ಶಿಷ್ಯಂದಿರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.