Advertisement

ಬೊಜ್ಜು ದೇಹಗಳ ಮೇಲೆ ಕೋವಿಡ್ ಸೋಂಕಿನ ತೀವ್ರತೆ

04:40 AM May 22, 2020 | Hari Prasad |

ವಿಶ್ವದಾದ್ಯಂತ ಕೋವಿಡ್ ವೈರಸ್ ಸಂಬಂದಿತ ಸಾವುಗಳು ಅರ್ಧ ದಶಲಕ್ಷದಷ್ಟು ಹೆಚ್ಚಾಗುತ್ತಿದ್ದು, ವೈದ್ಯಕೀಯ ರಂಗದಲ್ಲಿ ಹೊಸ ಪ್ರವೃತ್ತಿ ಮತ್ತು ಪ್ರಯೋಗಗಳು  ಹೊರಹೊಮ್ಮುತಿದೆ.

Advertisement

ಮಾರಣಾಂತಿಕ ಕೋವಿಡ್ 19 ರೋಗಿಗಳ ಗುಂಪುಗಳಲ್ಲಿ ಸ್ಥೂಲಕಾಯತೆ ಹೊಂದಿರುರವವರು ಹೆಚ್ಚಿನ ಪ್ರಮಾಣದಲ್ಲಿ ಜೀವ ಬೆದರಿಕೆಯನ್ನು ಎದುರಿಸಬೇಕಾಗಿದೆ. ನ್ಯೂಯಾರ್ಕ್ ನ ಇತ್ತೀಚಿನ ವರದಿಯ ಪ್ರಕಾರ 5  ರಲ್ಲಿ 2  ಜನರಿಗೆ ಉಸಿರಾಟದ ಕೊಳವೆಯ ಅಗತ್ಯವಿದೆ.

ಫ್ರಾನ್ಸ್ ನನ ICU ವರದಿ ಪ್ರಕಾರ ಶೇ.90 ಸ್ತೂಲಕಾಯದ ರೋಗಿಗಳಿಗೆ ಮೆಕ್ಯಾನಿಕಲ್ ವೆಂಟಿಲೇಟರ್ ಅತ್ಯವಶ್ಯವಾಗಿದೆ. ಬೊಜ್ಜು ಹೆಚ್ಚು ಇರುವ ರೋಗಿಗಳಿಗೆ ತೀರ್ವ ನಿಗಾ ಘಟಕದ ವೆಂಟಿಲೇಟರ್ ವ್ಯವಸ್ಥೆ ಕಡ್ಡಾಯವಾಗಲು ಹಲವಾರು ಕಾರಣಗಳಿವೆ.

ಎದೆ ಮತ್ತು ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಶ್ವಾಸಕೋಶದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಹೀಗಾಗಿ ಬೊಜ್ಜು ಹೊಂದಿರುವ ಜನರು ಉಸಿರಾಟದ ಸಾಮಾನ್ಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.

ಹೆಚ್ಚುವರಿ ತೂಕವನ್ನು ಹೊತ್ತುಕೊಳ್ಳುವುದರಿಂದ ದೇಹಕ್ಕೆ ಆಮ್ಲಜನಕದ ಬೇಡಿಕೆಯಾಗಿ ಉಸಿರಾಟದ ತೊಂದರೆ ಅಥವಾ ಉಸಿರಾಟ ನಿಲ್ಲುವ ಪ್ರಮೇಯಗಳನ್ನು ಎದುರಿಸಬೇಕಾಗತ್ತದೆ.

Advertisement

ಹೃದಯ ಮತ್ತು ಶ್ವಾಸಕೋಶದ ಮೇಲೆ ಬೀರುವ ಪರಿಣಾಮಗಳು COVID 19 ರೋಗ ಲಕ್ಷಣಗಳನ್ನು ಮತ್ತಷ್ಟು ಹದಗೆಡಸುತ್ತವೆ. ವೈರಸ್ ನ ಅನುಚಿತ ವರ್ತನೆಗಳು ಈ ತರಹದ ರೋಗಿಗಳಿಗೆ ಮಾರಕವಾಗಿವೆ. COVID 19 ಪರಿಣಾಮ ಶ್ವಾಶಕೋಶದ ಅಂಗಗಳಿಗೆ ಸೇರಿದಂತೆ ಹಾನಿ  ಉಂಟುಮಾಡುತ್ತದೆ.

ಬೊಜ್ಜು ಹೊಂದಿರುವ ಜನರು ಸಾಮಾನ್ಯವಾಗಿ ಕಡಿಮೆ ರೋಗ ನಿರೋಧಕ ಶಕ್ತಿ ಅಥವಾ ಉರಿ ಊತವನ್ನು ಅನುಭವಿಸಬೇಕಾಗುತ್ತದೆ. ಕೋವಿಡ್ ವೈರಸ್ ಸೋಂಕಿಗೆ ಈ ತರಹದ ವ್ಯಕ್ತಿಗಳ ರೋಗ ನಿರೋಧಕ ಅಂಶಗಳ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ.

ಕೊಬ್ಬಿನ ಅಂಗಾಂಶವು ಮ್ಯಾಕ್ರೋಫೇಜ್‌ಗಳು ಮತ್ತು ಟಿ ಕೋಶಗಳನ್ನು ಒಳಗೊಂಡಂತೆ ಹಲವಾರು ರೋಗನಿರೋಧಕ ಕೋಶಗಳಿಗೆ ವಿಶಾಲವಾದ ಜಲಾಶಯವಾಗಿ ಕಾರ್ಯನಿರ್ವಹಿಸುತ್ತದೆ.

ಮ್ಯಾಕ್ರೋಫೇಜ್‌ಗಳು ಸಾಂಕ್ರಾಮಿಕ ಏಜೆಂಟ್‌ಗಳನ್ನು (ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ) ತಿನ್ನುತ್ತವೆ ಮತ್ತು ಎಂಜಲುಗಳನ್ನು ಟಿ ಕೋಶಗಳಿಗೆ ಪ್ರಸ್ತುತಪಡಿಸುತ್ತವೆ. ಸೈಟೊಕಿನ್‌ಗಳು “ಮೆಸೆಂಜರ್‌ಗಳು” ಆಗಿ ಕಾರ್ಯನಿರ್ವಹಿಸುತ್ತವೆ, ಇದು ರೋಗನಿರೋಧಕ ಕೋಶಗಳನ್ನು ಸಂಭಾವ್ಯ ಬೆದರಿಕೆಗಳ ಬಗ್ಗೆ ಹೇಳುತ್ತದೆ ಮತ್ತು ರೋಗಕಾರಕವನ್ನು ನಾಶಮಾಡುವ ಸಲುವಾಗಿ ಉರಿಯೂತವನ್ನು ಪ್ರಚೋದಿಸುತ್ತದೆ.

ಕೋವಿಡ್ ವೈರಸ್ ಸೋಂಕಿಗೆ ಒಳಗಾದ ನಂತರ, ಬೊಜ್ಜು ವ್ಯಕ್ತಿಯ ದೇಹವು ಪ್ರತಿರಕ್ಷಣಾ ಕೋಶಗಳ ಮಂಡಲವನ್ನು ನಾಶಮಾಡುತ್ತವೆ. ಬೊಜ್ಜು ಹೊಂದಿರುವ ಜನರು ಸಾಮಾಜಿಕ ದೂರ ಕ್ರಮಗಳನ್ನು ಅನುಸರಿಸುವುದು ಸೇರಿದಂತೆ COVID-19 ಬರದಂತೆ ತಮ್ಮನ್ನು ರಕ್ಷಿಸಿಕೊಳ್ಳಲು ಸರಿಯಾದ ಆಹಾರ ಕ್ರಮ, ಸ್ಯಾನಿಟೇಷನ್, ದೇಹದಂಡನೆ ಮುಂತಾದ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. COVID-19 ಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆ ಇಲ್ಲ. ವೈದ್ಯರು ಪ್ರಾಥಮಿಕವಾಗಿ ರೋಗಿಗಳನ್ನು ಆಮ್ಲಜನಕ ಮತ್ತು ಹೈಡ್ರೀಕರಿಸಿದಂತೆ ನೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next