Advertisement

AI News: ಚಂದ್ರಯಾನಕ್ಕೂ ಮುನ್ನ ಕಲಾಂಗೆ ನಮನ

08:58 PM Aug 09, 2023 | Team Udayavani |

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಪಗ್ರಹವು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಮಾಡಲು ದಿನಗಣನೆ ಆರಂಭವಾಗಿದೆ.

Advertisement

ಈ ನಡುವೆ ಇಸ್ರೋ ಸಂಸ್ಥೆಗೆ ಬುನಾದಿ ಹಾಕಿರುವ ಮಹನೀಯರನ್ನು ಕೃತಕ ಬುದ್ಧಿಮತ್ತೆ (ಎಐ) ಚಿತ್ರಗಳ ಮೂಲಕ ಸ್ಮರಿಸಿ, ಅವರಿಗೆ ಗೌರವ ಸೂಚಿಸಿದೆ. ಚಂದ್ರಯಾನ-3 ಉಪಗ್ರಹವು ಯಶಸ್ವಿಯಾಗಿ ಶಿಶಿರನ ಮೇಲೆ ಲ್ಯಾಂಡ್‌ ಆದಾಗ, ಒಂದು ವೇಳೆ ಇಸ್ರೋ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ, ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹಾ ಡಾ.ವಿಕ್ರಮ್‌ ಸಾರಾಬಾಯಿ, ಬಾಹ್ಯಾಕಾಶ ವಿಜ್ಞಾನಿ ಸತೀಶ್‌ ಧವನ್‌ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಯು.ಆರ್‌.ರಾವ್‌ ಅವರು ಉಪಸ್ಥಿತರಿದ್ದಿದ್ದರೆ ಹೇಗೆ ಸಂಭ್ರಮಿಸುತ್ತಿದ್ದರು, ಹೇಗೆ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು ಎಂಬುದನ್ನು ಎಐ ಚಿತ್ರಗಳಲ್ಲಿ ತೋರಿಸಲಾಗಿದೆ.

ಅಲ್ಲದೇ ಚಂದ್ರಯಾನ-3 ಉಪಗ್ರಹವು ಶಿಶಿರನ ಮೇಲೆ ಲ್ಯಾಂಡ್‌ ಆದ ಚಿತ್ರವು ಎಐ ತಂತ್ರಜ್ಞಾನ ಸಹಾಯದಿಂದ ಮೂಡಿಬಂದಿದೆ. ಖ್ಯಾತ ಎಐ ಚಿತ್ರಕಾರ ರಾಹುಲ್‌ ಗುಪ್ತ ಇವುಗಳನ್ನು ಚಿತ್ರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next