Advertisement

ಕಲಾವಿದರಿಗೆ ವಿಧೇಯತೆ ಮುಖ್ಯ

10:49 AM Mar 04, 2019 | Team Udayavani |

ರಾಮನಗರ: ಕಲಾವಿದರಾಗ ಬಯಸುವವರಲ್ಲಿ ವಿನಯ ಮತ್ತು ವಿಧೇಯತೆ ಇರಬೇಕು. ಆಗ ಮಾತ್ರ ಜನ ಮೆಚ್ಚುವಕಲಾವಿದನಾಗಿ ರೂಪುಗೊಳ್ಳಲು ಸಾಧ್ಯಎಂದು ರಂಗಭೂಮಿಯ ಹಿರಿಯ ನಿರ್ದೇಶಕ ವೆಂಕಟರಾಮ್‌ ಕುಪ್ಯ ಹೇಳಿದರು.

Advertisement

ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾರಂಗದಂಗಳದಲ್ಲಿ ಶನಿವಾರ ಶಾಂತಲಾಚಾರಿಟಬಲ್‌ ಟ್ರಸ್ಟ್‌ ಹಮ್ಮಿಕೊಂಡಿದ್ದ ತಿಂಗಳಕಲಾ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಹಿರಿಯ ಕಲಾವಿದರ ಸೇವೆ ಮಾಡಿದ್ದರಿಂದಲೇ ಪರಿಪೂರ್ಣ ಕಲಾವಿದನಾಗಿ ರೂಪು ಗೊಂಡಿದ್ದಾಗಿ ಅವರುಹೇಳಿದರು.

ಸದ್ಯ 91 ವರ್ಷ ವಯೋಮಾನದ ತಾವು 1943ರಲ್ಲಿ ಎಚ್‌.ಆರ್‌.ಶಾಸಿŒಯವರ ನಾಟಕ ಕಂಪನಿಗೆ ಸೇರಿಕೊಂಡಿದ್ದಾಗಿ ತಮ್ಮ ಜೀವನದ ಪುಟಗಳನ್ನು ತೆರೆದಿಟ್ಟರು. ನಂತರ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಸೇರಿದ್ದಾಗಿ ಹೇಳಿದರು. ಆಗ ಎಣ್ಣೆ ದೀಪ, ಪುಟ್‌ಲೆçಟ್‌ ಬೆಳಕಿನಲ್ಲಿ  ನಾಟಕ ಪ್ರದರ್ಶನ ನಡೆಯುತ್ತಿತ್ತು. ಧ್ವನಿವರ್ಧಕವೂ ಇರಲಿಲ್ಲ ಎಂದು ಹೇಳಿದರು.

ತಿಂಗಳುಗಟ್ಟಲೇ ಕಾಯುತ್ತಿದ್ದೆವು: ತಾವು17ನೇ ವಯಸ್ಸಿನಲ್ಲಿ ತಮಿಳುನಾಡಿನ ಎಂ.ಜಿ.ರಾಮಚಂದ್ರನ್‌ ಜತೆ ತಮಿಳು ನಾಟಕದಲ್ಲಿ ನಟಿಸಿದ್ದಾಗಿ, ಹೊನ್ನಪ್ಪ ಭಾಗವತರ್‌,ಸಮ್ಮನ್‌ ಮೂರ್ತಿ ಭಾಗವತರ್‌ ಹತ್ತಿರಸಂಗೀತ ಕಲಿತಿದ್ದಾಗಿ ಹೇಳಿದರು. ಆಗಿನಕಾಲದಲ್ಲಿ ಅಭಿನಯಿಸಲು ತಿಂಗಳು ಗಟ್ಟಲೆ ಕಾಯಬೇಕಾಗಿತ್ತು ಎಂದು  ಹೇಳಿದರು.

ಮಗುವಿನ ಹಾಲಿಗೂ ಕಾಸಿಲ್ಲ: 1956ರಲ್ಲಿ ಚಾಮುಂಡೇಶ್ವರಿ ಕಂಪನಿಯಲ್ಲಿ ಕೆಲಸ ಮಾಡಿದೆ. ಮಗುವಿನ ಹಾಲಿಗೂ ಕಾಸಿಲ್ಲದೆ ಪರಿಸ್ಥಿತಿ. ರಸ್ತೆಯಲ್ಲಿ ಸಿಕ್ಕಿದ ಒಂದಾಣೆಯಿಂದ ಮಗುವಿಗೆ ಹಾಲು ಖರೀದಿ ಮಾಡಿದ್ದು, ತಾವು ಜೀವನದಲ್ಲಿ ಪಟ್ಟ ಸಂಕಷ್ಟದ ಸನ್ನಿವೇಶಗಳ ಬಗ್ಗೆ ಅವರು ತಿಳಿಸಿದರು. ಈಗ ಭಗೀರಥನನ್ನು ಕುರಿತ ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿರುವು ದಾಗಿ ತಿಳಿಸಿದರು. ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, ನಾಟಕ ರಂಗದಲ್ಲೇ ದುಡಿದು ಏಳು ಮಕ್ಕಳನ್ನು ಸಾಕಿ ಸಲಹಿ, ಮದುವೆ ಮಾಡಿದೆ. ಬಾಲಕ ನಿದ್ದಾಗಲೇ ನಾಟಕದ ಗೀಳು ಹಚ್ಚಿಕೊಂಡ ತಮಗೆ ರಂಗಭೂಮಿ ಕ್ಷೇತ್ರ ಜನಮನ್ನಣೆ ತಂದುಕೊಟ್ಟಿದೆ ಎಂದು ಅವರು ಹೇಳಿದರು.

Advertisement

80 ವರ್ಷ ನಿರಂತರ ರಂಗಭೂಮಿ ಸೇವೆ: ಶಾಂತಲಾ ಚಾರಿಟಬಲ್‌ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್‌ ಮಾತನಾಡಿ, ರಂಗಭೂಮಿಯ ಹಿರಿಯ ಕಲಾವಿದರಾದ ವೆಂಕಟರಾಮ್‌ಕುಪ್ಯ ಈ ತಲೆಮಾರಿನ ಕಲಾವಿದರಿಗೆ ಮಾದರಿ ಯಾಗಿದ್ದಾರೆ. 80 ವರ್ಷಗಳಿಂದ ನಿರಂತರ ವಾಗಿ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲತೆಯಿಂದ ಇದ್ದಾರೆ ಎಂದು ಹೇಳಿದರು.

ದೇಶಿಯ ಕಲೆ ಉಳಿಸಿ: ಅಧುನಿಕ ಮಾಧ್ಯಮಗಳು ರಂಗ ಕಲೆ ನೇಪಥ್ಯಕ್ಕೆ ಸರಿಯುತ್ತಿದೆ. ಯುವ ಸಮುದಾಯ ಈ ಕಲೆಗಳನ್ನು ಉಳಿಸಿಕೊಳ್ಳಲು ಮುಂದಾಗ ಬೇಕು. ರಂಗಭೂಮಿ ಉಳಿದರೆ ದೇಶಿಯ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಗಳು ಉಳಿಯುತ್ತವೆ ಎಂದು ಹೇಳಿದರು.

ನಾಟಕಗಳನ್ನು ವೀಕ್ಷಿಸಿ: ನಾಟಕಗಳು ನೈಜತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತಮ ಪಡಿಸುವಲ್ಲಿ ಮಹತ್ವ ಪೂರ್ಣವಾದವುಗಳಾಗಿವೆ. ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆಗೆ ಮತ್ತು ಕಲಾವಿದರಿಗೆ ಪೋ›ತ್ಸಾಹ ನೀಡುವಂತಹ ಕೆಲಸವಾಗಬೇಕಾಗಿದೆ ಎಂದು ಹೇಳಿದರು.

ಸಂಗೀತ ವಿದ್ವಾನ್‌ ಶಿವಾಜಿರಾವ್‌, ರಂಗಭೂಮಿ ಕಲಾವಿದ ರಂಗಸ್ವಾಮಿ, ಗಾಯಕ ಮಹದೇವಯ್ಯ, ಲೋಹಿಯಾ ಅಧ್ಯಯನ ಕೇಂದ್ರದ ಶ್ರೀನಿವಾಸ್‌ ಕರಿಯಪ್ಪ, ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪರಿಸರವಾದಿ ಬಿ.ಟಿ. ರಾಜೇಂದ್ರ, ರೇಣುಕಾಪ್ರಸಾದ್‌, ಉಪನ್ಯಾಸಕ ಸಿ. ರಮೇಶ್‌ ಹೊಸದೊಡ್ಡಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next