Advertisement

ಒಬ್ಬರ ಮೃತದೇಹ ಮತ್ತೊಂದು ಕುಟುಂಬಕ್ಕೆ ಹಸ್ತಾಂತರ; ಆಸ್ಪತ್ರೆಯ ಇಬ್ಬರು ಸಿಬ್ಬಂದಿ ಅಮಾನತು

03:04 PM Sep 15, 2020 | keerthan |

ಮುಂಬಯಿ: ಮಹಾನಗರ ಪಾಲಿಕೆ ಸಂಚಾಲಿತ ಆಸ್ಪತ್ರೆಯೊಂದು 28ರ ಹರೆಯದ ವ್ಯಕ್ತಿಯ ಶವವನ್ನು ಬೇರೊಂದು ಕುಟುಂಬಕ್ಕೆ ಹಸ್ತಾಂತರಿಸಿದ ಹಿನ್ನೆಲೆ ಮೃತರ ಸಂಬಂಧಿಕರು ವೈದ್ಯಕೀಯ ಸೌಲಭ್ಯದಲ್ಲಿ ಕೋಲಾಹಲ ಸೃಷ್ಟಿಸಿದ ಘಟನೆ ನಡೆದಿದೆ.

Advertisement

ಲೋಕಮಾನ್ಯ ತಿಲಕ್‌ ಮುನ್ಸಿಪಲ್‌ ಜನರಲ್‌ ಆಸ್ಪತ್ರೆಯಲ್ಲಿ ರವಿವಾರ ಈ ಎಡವಟ್ಟಿನ ಘಟನೆ ನಡೆದಿದ್ದು, ಇದಾದ ಬಳಿಕ ಶವಾಗಾರದ ಇಬ್ಬರು ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಸೋಮವಾರ ತಿಳಿಸಿದೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೂತ್ರಪಿಂಡವನ್ನು ತೆಗೆದುಹಾಕಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಬಿಎಂಸಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ಸಯಾನ್‌ ಆಸ್ಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ವೈದ್ಯಕೀಯ ಸೌಲಭ್ಯವು ರವಿವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಅಂಕುಶ್‌ ಸರ್ವಾಡೆ (28) ಅವರ ದೇಹವನ್ನು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಹೇಮಂತ್‌ ದಿಗಂಬರ್‌ ಎಂಬ ಇನ್ನೊಬ್ಬ ವ್ಯಕ್ತಿಯ ಕುಟುಂಬಕ್ಕೆ ಒಪ್ಪಿಸಿತ್ತು. ಈ ಅಚಾತುರ್ಯವು ಬೆಳಕಿಗೆ ಬಂದಾಗ ಸರ್ವಾಡೆ ಅವರ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ನನ್ನ ಜಾಗದಲ್ಲಿ ನಿಮ್ಮ ಮಗಳು ಇದ್ದಿದ್ರೆ ಹೀಗೆ ಹೇಳ್ತೀರಾ? ಜಯಾ ಬಚ್ಚನ್ ಗೆ ಕಂಗನಾ ತಿರುಗೇಟು

Advertisement

ಬಿಎಂಸಿ ಪ್ರಕಾರ, ಸರ್ವಾಡೆ ಅವರನ್ನು ಆ. 28ರಂದು ಸಯಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತು ಶಸ್ತ್ರಚಿಕಿತ್ಸೆ ನಡೆಸಿದಾಗಿನಿಂದ ಜೀವ ಬೆಂಬಲದಲ್ಲಿದ್ದ ಅವರು ರವಿವಾರ ಬೆಳಗ್ಗೆ ನಿಧನ ಹೊಂದಿದರು. ಅದೇ ದಿಗಂಬರ್‌ ಅವರನ್ನು ಆ. 12ರಂದು ಮೃತ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು. ಸಯಾನ್‌ ಆಸ್ಪತ್ರೆಯು ರವಿವಾರ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ವೈದ್ಯಕೀಯ ಸೌಲಭ್ಯದ ಶವಾಗಾರದಲ್ಲಿ ಇರಿಸಿತ್ತು ಎಂದು ಬಿಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಜೆ 4ರ ಸುಮಾರಿಗೆ ಶವವನ್ನು ಪಡೆದುಕೊಳ್ಳುವುದಾಗಿ ಸರ್ವಾಡೆ ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next