Advertisement
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರುವ ಸಂಸದರ ಕಚೇರಿಯಲ್ಲಿ ಶುಕ್ರವಾರ ರಾ.ಹೆ. ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಕೇಂದ್ರ ಸರ ಕಾರದ ಭಾರತ ಮಾಲಾದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರ ರಾಷ್ಟ್ರೀಯ ಹೆದ್ದಾರಿ ಯಿಂದ- ಹೆದ್ದಾರಿಗೆ ಸಂಪರ್ಕ ಯೋಜನೆಯಲ್ಲಿ ಈ ಎರಡೂ ರಸ್ತೆ ಗಳನ್ನು ಚತುಷ್ಪಥವಾಗಿ ಉನ್ನತೀಕರಣಗೊಳಿಸುವ ಕಾಮಗಾರಿ ಕೈಗೊಳ್ಳ ಲಾಗುತ್ತಿದೆ. ಒಟ್ಟು 90 ಕಿ.ಮೀ. ರಸ್ತೆ ಉನ್ನತೀ ಕರಣ ಗೊಳ್ಳ ಲಿದೆ. ಇದರ ಸಮೀಕ್ಷೆ ಕಾರ್ಯವನ್ನು ಮುಂಬಯಿ ಸ್ಟೂಪ್ ಕನ್ಸಲ್ಟೆನ್ಸಿಗೆ ವಹಿಸಿ ಕೊಟ್ಟಿದ್ದು ಅ. 9 ರಂದು ಚಾಲನೆ ನೀಡಲಾಗುವುದು ಎಂದರು.
ಬಂಟ್ವಾಳ- ಸಿದ್ದಕಟ್ಟೆ- ಮೂಡ ಬಿದಿರೆ, ಕಲ್ಲಡ್ಕ- ವಿಟ್ಲ- ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆ ಗಳನ್ನು ಚತುಷ್ಪಥಗೊಳಿಸುವ ಯೋಜನೆ ಗಳಿಗೆ ಈಗಾಗಲೇ ಮಂಜೂ ರಾತಿ ದೊರಕಿದೆ. ಇದರಲ್ಲಿ ಕಲ್ಲಡ್ಕ- ವಿಟ್ಲ-ಚೇರ್ವತ್ತೂರು ಹಾಗೂ ಗುಂಡ್ಯ- ಸುಬ್ರಹ್ಮಣ್ಯ ರಸ್ತೆಗಳು ಟೆಂಡರ್ ಪ್ರಕ್ರಿಯೆ ಯಲ್ಲಿವೆ. ಕೇಂದ್ರ ಲೋಕೋಪ ಯೋಗಿ ಇಲಾಖೆ ಇದನ್ನು ಅನು ಷ್ಠಾನ ಗೊಳಿಸುತ್ತದೆ ಎಂದು ನಳಿನ್ ಕುಮಾರ್ ತಿಳಿಸಿದರು. ಅ. 30ರೊಳಗೆ ಹೆದ್ದಾರಿ ಗುಂಡಿ ಮುಚ್ಚಲು ಸೂಚನೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಮಳೆಯಿಂದಾಗಿ ಸಾಧ್ಯ ವಾಗಿರ ಲಿಲ್ಲ. ಅಕ್ಟೋಬರ್ 30ರೊಳಗೆ ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸ ಲಾಗಿದೆ ಎಂದು ಸಂಸದರು ತಿಳಿಸಿದರು.
Related Articles
Advertisement
ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚುವ ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯ ಲಾಗಿದೆ. ಬಿ.ಸಿ. ರೋಡಿನಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯ ಕುಮಾರ್ ತಿಳಿಸಿದರು.
ಪಡೀಲ್ ರೈಲ್ವೇ ಕೆಳಸೇತುವೆ ಅ. 16ಕ್ಕೆ ಸಂಚಾರಕ್ಕೆ ಮುಕ್ತರಾ.ಹೆ. 75ರಲ್ಲಿ ಪಡೀಲ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರೈಲ್ವೇ ಕೆಳಸೇತುವೆ ಅ. 16ರಂದು ಸಂಚಾರಕ್ಕೆ ತೆರವುಗೊಳಿಸಲಾಗುವುದು. ಬಳಿಕ ಹಳೆಯ ಕೆಳಸೇತುವೆಯನ್ನು ದುರಸ್ತಿ ಕಾಮಗಾರಿಗಳಿಗಾಗಿ ಮುಚ್ಚ ಲಾಗುವುದು. ರೈಲುಗಳು ಸಂಚರಿಸುವಾಗ ಸೇತುವೆ ಕೆಳಗೆ ಸಾಗುವ ವಾಹನಗಳ ಮೇಲೆ ಮಲಿನಗೊಂಡ ನೀರು ಬೀಳುತ್ತಿರುವುದನ್ನುನಿಲ್ಲಿ ಸಲು ತಡೆಯನ್ನು ನಿರ್ಮಿಸಲಾಗುವುದು. ಪಂಪ್‌ವೆಲ್ ಹಾಗೂ ತೊಕ್ಕೊಟ್ಟು ಫ್ಲೆ$çಓವರ್ ಕಾಮಗಾರಿಗಳನ್ನು ಮುಂದಿನ ಎಪ್ರಿಲ್‌ನೊಳಗೆ ಪೂರ್ಣ ಗೊಳಿ ಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ನಳಿನ್ ವಿವರಿಸಿದರು.